ಚಿಕ್ಕಮಗಳೂರು: ಸಖರಾಯಪಟ್ಟಣ ಬಳಿಯ ಬಿಳೇಕಲ್ಲಹಳ್ಳಿಯಲ್ಲಿ ಮಹಿಳೆಯೊಬ್ಬಳು ಪ್ರಿಯತಮನೊಂದಿಗೆ ಸೇರಿ ತನ್ನ ಪತಿಯನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ.
ನಿರ್ವಾಣೇಗೌಡ (36) ಎಂಬುವರು ಕೊಲೆಗೀಡಾದ ವ್ಯಕ್ತಿಯಾಗಿದ್ದಾರೆ.
ಇವರ ಪತ್ನಿ ಪುಷ್ಪಾ (32) ಹಾಗೂ ಆಕೆಯ ಪ್ರಿಯತಮ ನಟೇಶ್ (26) ಇಬ್ಬರು ಕಳೆದ 5 ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದರು. ಈ ಬಗ್ಗೆ ವಿಷಯ ತಿಳಿದ ನಿರ್ವಾಣೇಗೌಡರು ಪತ್ನಿಗೆ ನಟೇಶ್ ವೊಂದಿಗಿನ ಅನೈತಿಕ ಸಂಬಂಧ ತ್ಯಜಿಸಲು ಹೇಳಿದ್ದಾರೆ. ಇದರಿಂದ ಸಿಟ್ಟುಗೊಂಡ ಪುಷ್ಪಾ ಗಂಡ ನಿರ್ವಾಣೇಗೌಡರನ್ನು ಸ್ನಾನಕ್ಕೆಂದು ಸಮೀಪದ ಕೆರೆಗೆ ಕರೆದೊಯ್ದಿದ್ದು, ಈ ವೇಳೆ ನಟೇಶನ ಸಹಕಾರದೊಂದಿಗೆ ಕೆರೆಯಲ್ಲಿ ಮುಳುಗಿಸಿ ಕೊಲೆಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸದ್ಯ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದು, ಈ ಕುರಿತು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.