ಅಂತರಾಷ್ಟ್ರೀಯ

ನೆಟ್ ಬ್ಯಾಂಕ್ ಹ್ಯಾಕ್ :81ಮಿಲಿಯನ್ ಡಾಲರ್ ದರೋಡೆ

Pinterest LinkedIn Tumblr

3000-e1458125055511ಢಾಕಾ: ಇಂಟರ್‌ನೆಟ್ ಬ್ಯಾಂಕಿಂಗ್ ಹ್ಯಾಕ್ ಮಾಡಿ ಬಾಂಗ್ಲಾದೇಶದ ಸೆಂಟ್ರಲ್ ಬ್ಯಾಂಕ್‌ನ ವಿದೇಶೀ ಅಕೌಂಟ್ ನಿಂದ 81 ಮಿಲಿಯನ್ ಅಮೆರಿಕನ್ ಡಾಲರ್ ದರೋಡೆ ಮಾಡಲಾಗಿದೆ.

ಬಾಂಗ್ಲಾದೇಶ್ ಬ್ಯಾಂಕ್‌ನ ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ನ್ಯೂಯಾರ್ಕ್‌ನ ಅಕೌಂಟಿನಿಂದ ಫೆಬ್ರವರಿ ಮೊದಲ ವಾರದಲ್ಲಿ ಆಗಂತುಕರು ಕೋಟಿಗಟ್ಟಲೆ ಹಣ ದರೋಡೆ ಮಾಡಿದ್ದರು. ದರೋಡೆ ಮಾಡಿದ ದುಡ್ಡಿನಿಂದ 8.1 ಕೋಟಿ ಡಾಲರ್ ಫಿಲಿಫೇನ್ಸ್‌ನ ಅಕೌಂಟಿಗೂ, ಬಾಕಿ ದುಡ್ಡನ್ನು ಶ್ರೀಲಂಕಾದ ಅಕೌಂಟ್‌ಗೂ ರವಾನಿಸಲಾಗಿದೆ. ಈ ಘಟನೆ ನಡೆದು ವಾರಗಳಾಗಿದ್ದರೂ ಬಾಂಗ್ಲಾದೇಶದ ವಿತ್ತ ಸಚಿವರಿಗೆ ಈ ವಿಷಯ ಗೊತ್ತಾಗಲೇ ಇಲ್ಲ ಎಂದು ವಿತ್ತ ಸಚಿವ ಎಎಂಎ ಮುಹೀತ್ ಹೇಳಿದ್ದಾರೆ.

ಬ್ಯಾಂಕ್ ಗವರ್ನರ್ ಅತೀವುರ್ ರೆಹಮಾನ್ (64) ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ವಿತ್ತ ಸಚಿವಾಲಯದ ಮಾಜಿ ಕಾರ್ಯದರ್ಶಿ ಫಸ್ಲ್ ಕಬೀರ್ ಅವರನ್ನು ಗವರ್ನರ್ ಆಗಿ ನೇಮಕ ಮಾಡಲಾಗಿದೆ.

ಒಂದು ಅಕೌಂಟ್‌ನಿಂದ ಮತ್ತೊಂದು ಅಕೌಂಟ್‌ಗೆ ಹಣ ವರ್ಗಾವಣೆ ಮಾಡುವ ಇಂಟರ್‌ನೆಟ್ ಬ್ಯಾಂಕಿಂಗ್‌ಗಾಗಿ ಬಳಸಲ್ಪಡುವ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿ ಈ ದರೋಡೆ ಮಾಡಲಾಗಿದೆ ಎನ್ನಲಾಗಿದೆ.

Write A Comment