ಕರ್ನಾಟಕ

ಕರ್ನಾಟಕದ ಮೊತ್ತ ಮೊದಲ ವೈಫೈ ನಗರ ಎಂಬ ಖ್ಯಾತಿಗೆ ಪಾತ್ರವಾಗದ ಗದಗ ನಗರ !

Pinterest LinkedIn Tumblr

wifi

ಹುಬ್ಬಳ್ಳಿ: ಗದಗ ನಗರ ಕರ್ನಾಟಕದ ಮೊತ್ತ ಮೊದಲ ವೈಫೈ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ. ನಗರದ 25 ಸ್ಥಳಗಳಲ್ಲಿ ಸಂಪೂರ್ಣ ವೈಫೈ ಸೌಲಭ್ಯ ಒದಗಿಸಲಾಗಿದೆ.

ಕರ್ನಾಟಕದ ಉಳಿದ ನಗರಗಳಿಗಿಂತ ವಿಶಾಲವಾದ ಇಂಟರ್ನೆಟ್ ಸೌಲಭ್ಯ ಹೊಂದಿದೆ. ಕೇವಲ ಸರ್ಕಾರಿ ಕಚೇರಿಗಳಲ್ಲಿ ಮಾತ್ರವಲ್ಲದೇ, ಹಳೇಯ ಬಸ್ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ಪ್ರವಾಸಿ ಸ್ಥಳಗಳಿಗೂ ಕೂಡ ವೈಫೈ ಸೌಲಭ್ಯ ಕಲ್ಪಿಸಲಾಗಿದೆ.

25 ಸ್ಥಳಗಳಲ್ಲಿ ವೈ ಫೈ ಅಳವಡಿಕೆ ಕಾರ್ಯ ಮುಗಿದಿದ್ದು, ಬುಧವಾರದಿಂದ ವಿದ್ಯುಕ್ತವಾಗಿ ಕಾರ್ಯಾರಂಭ ಮಾಡಲಿದೆ. ಗದಗ ನಗರಕ್ಕೆ ವೈ ಫೈ ಅಳವಡಿಸುವ ಸಂಪೂರ್ಣ ಜವಾಬ್ದಾರಿಯನ್ನು ಬಿಎಸ್ ಎನ್ ಎಲ್ ತೆಗೆದುಕೊಂಡಿದೆ.

ಗದಗದಲ್ಲಿ ಅಳವಡಿಸಿರುವ ವೈಫೈ ಎರಡು ಎಂಬಿಪಿಎಸ್ ಸ್ಪೀಡ್ ಇದ್ದು ಪ್ರತಿದಿನ 1 ಸಾವಿರ ಬಳಕೆದಾರರು 200 ಎಂಬಿ ಡಾಟಾವನ್ನು ಉಚಿತವಾಗಿ ಪಡೆಯಬಹುದಾಗಿದೆ.

Write A Comment