ಕರ್ನಾಟಕ

ತಂದೆ ತಾಯಿ ಮದುವೆ ವಾರ್ಷಿಕೋತ್ಸವಕ್ಕೆ ಬಟ್ಟೆ ತರಲು ಹೋಗಿ ಹೆಣವಾದಳು

Pinterest LinkedIn Tumblr

bmtc_accident

ಬೆಂಗಳೂರು: ಎರಡು ಬಿಎಂಟಿಸಿ ಬಸ್ ಗಳ ನಡುವೆ ಸಿಲುಕಿ 18 ವರ್ಷದ ಪ್ಯಾರಮೆಡಿಕಲ್ ಓದುತ್ತಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದೆ.

ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಶನಿವಾರ ಫ್ಲಾಂಟ್ ಫಾರಂ ದಾಟುತ್ತಿದ್ದ ವೇಳೆ ಎರಡು ಬಸ್ ಗಳ ನಡುವೆ ಸಿಲುಕಿ ಕಾಲೇಜು ವಿದ್ಯಾರ್ಥಿನಿ ಆರ್ ರೋಹಿಣಿ(18) ಮೃತಪಟ್ಟಿದ್ದಾರೆ.

ರವಿಶಂಕರ್ ಹಾಗೂ ವಿಶಾಲಮ್ಮ ದಂಪತಿಗಳ ಏಕೈಕ ಪುತ್ರಿಯಾದ ರೋಹಿಣಿ ಬಸವನಗುಡಿಯಲ್ಲಿ ಖಾಸಗಿ ಕಾಲೇಜಿನಲ್ಲಿ ಪ್ಯಾರಾಮೆಡಿಕಲ್ ಓದುತ್ತಿದ್ದರು. ತಂದೆ ತಾಯಿಯ ಮದುವೆ ವಾರ್ಷಿಕೋತ್ಸವಕ್ಕಾಗಿ ಬಟ್ಟೆ ಖರೀದಿಸಲು ಶಾಪಿಂಗ್ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಸಂಜೆ 4 ಗಂಟೆ ಸುಮಾರಿಗೆ ಯಶವಂತಪುರ ಬಸ್ ನಿಲ್ದಾಣದಲ್ಲಿ ಟಿ ದಾಸರಹಳ್ಳಿ ಕಡೆಗೆ ಹೋಗುವ ಬಸ್ ಫ್ಲ್ಯಾಟ್ ಫಾಂರ ನಂ4ಕ್ಕೆ ಬಂದಿದೆ. ಅದಕ್ಕೆ ಹತ್ತುವ ಸಲುವಾಗಿ, ಫ್ಲ್ಯಾಟ್ ಫಾರಂ 5ರಲ್ಲಿ ನಿಂತಿದ್ದ ಎರಡು ಬಸ್ ಗಳು ಮಧ್ಯ ಹಾದು ಹೋಗುತ್ತಿದ್ದರು. ಇದೇ ವೇಳೆ ಬಸ್ ಚಾಲಕ ಒಮ್ಮೆಲೆ ಬಸ್ಸನ್ನು ಹಿಂದಕ್ಕೆ ಚಲಿಸಿದ್ದರಿಂದ ರೋಹಿಣಿ ಅವರು ಎರಡು ಬಸ್ ಗಳ ಮಧ್ಯೆ ಸಿಲುಕಿದ್ದಾರೆ. ಘಟನೆಯಲ್ಲಿ ಅವರ ತಲೆ ಮತ್ತು ದೇಹ ನಜ್ಜುಗುಜ್ಜಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರೋಹಿಣಿ ಎರಡು ಕಣ್ಣುಗಳನ್ನು ಪೋಷಕರು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಎಂಟಿಸಿ ಬಸ್ ಚಾಲಕ ಮಗ್ದೂಂ ಸಾಬ್(39)ನನ್ನು ಬಂಧಿಸಲಾಗಿದೆ.

Write A Comment