ರಾಷ್ಟ್ರೀಯ

ಐಟಂ ಸಾಂಗ್ ಗೆ ಡ್ಯಾನ್ಸ್ ಮಾಡುವಂತೆ ವಧುವಿಗೆ ಒತ್ತಾಯ: ಪೊಲೀಸರ ಅತಿಥಿಯಾದ ವರ

Pinterest LinkedIn Tumblr

333

ಆಗ್ರಾ: ಮದುವೆ ಸಮಾರಂಭದಲ್ಲಿ ಐಟಂ ಸಾಂಗ್ ಗೆ ಡ್ಯಾನ್ಸ್ ಮಾಡುವಂತೆ ಒತ್ತಾಯಿಸಿದ್ದರಿಂದ ಆಕ್ರೋಶಗೊಂಡ ವಧು ಪೊಲೀಸ್ ಠಾಣೆಗ ದೂರು ನೀಡಿ ವರನಿಗೆ ಕೋಳ ಹಾಕಿಸಿರುವ ಘಟನೆ ಫಿರೋಜಾಬಾದ್ ನಲ್ಲಿ ನಡೆದಿದೆ.

ಫಿರೋಜಾಬಾದ್‌‌ನ ವರ ತನ್ನ ಮದುವೆ ಸಂದರ್ಭದಲ್ಲಿ ಗೆಳೆಯರ ಒತ್ತಾಯಕ್ಕೆ ಮಣಿದು ಮದುವೆ ಮಂಟಪದಲ್ಲಿ ಡ್ಯಾನ್ಸ್ ಮಾಡಿದ್ದಾನೆ. ಈ ವೇಳೆ ಗೆಳೆಯರ ಅಣಿತಿಯಂತೆ ಪತ್ನಿಯನ್ನೂ ಕುಣಿಯಲು ಒತ್ತಾಯಿಸಿದ್ದಾನೆ. ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ ವಧು ಡ್ಯಾನ್ಸ್ ಮಾಡಲು ನಿರಾಕರಿಸಿದ್ದಾಳೆ. ಆದರೆ ಆಕೆಯನ್ನು ಬಿಡದ ವರ ಕೈ ಹಿಡಿದು ಎಳೆದಿದ್ದಾನ. ಕೂಡಲೇ ವಧುವಿನ ಸಹಾಯಕ್ಕೆ ಧಾವಿಸಿದ ಆಕೆಯ ಚಿಕ್ಕಪ್ಪನಿಗೆ ವರ ಕಪಾಳಕ್ಕೆ ಬಾರಿಸಿ ಹಿಂದೆ ಸರಿಯುವಂತೆ ಗದರಿದ್ದಾನೆ.

ಇದರಿಂದ ಇಡೀ ಮದುವೆ ಮಂಟಪ ಕೆಲ ಹೊತ್ತು ಸ್ತಬ್ಧವಾಗಿದೆ. ಕೈ ಹಿಡಿದು ಕಾಪಾಡಬೇಕಿದ್ದ ಗಂಡ ಹೀಗೆ ಸಾರ್ವಜನಿಕವಾಗಿ ಅಸಭ್ಯ ವರ್ತನೆ ತೋರಿದ್ದರ ಹಿನ್ನೆಲೆಯಲ್ಲಿ ವಧು ಮದುವೆಗೆ ನಿರಾಕರಿಸಿದ್ದಾಳೆ. ಇಷ್ಟೇ ಅಲ್ಲದೇ ಕೂಡಲೇ ಪೊಲೀಸರಿಗೆ ಫೋನ್ ಮಾಡಿ ವರನ ವಿರುದ್ಧ ದೂರು ನೀಡಿದ್ದಾಳೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ವರನನ್ನು ವಶಕ್ಕೆ ಪಡೆದಿದ್ದಾರೆ.ಸದ್ಯ ಯುವತಿ ನೀಡಿದ ದೂರನ್ನು ಸ್ವೀಕರಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment