ಕರ್ನಾಟಕ

ಒಡಿಶಾದಲ್ಲಿ ಐಒಸಿ ವಿಮಾನ ಇಂಧನ 100ನೇ ಘಟಕ

Pinterest LinkedIn Tumblr

praಬೆಂಗಳೂರು: ಇಂಡಿಯನ್ ಆಯಿಲ್ ಕಾಪೋರೇಷನ್ (ಐಒಸಿ) ಒಡಿಶಾ ಸುಂದರಘಡ್ ಜಿಲ್ಲೆಯ ರೂರ್ಕೆಲಾದಲ್ಲಿ ನಿರ್ವಿುಸಿರುವ ವಿಮಾನ ಇಂಧನದ 100ನೇ ಘಟಕವನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ವೇಂದ್ರ ಪ್ರಧಾನ್ ಸೋಮವಾರ ಉದ್ಘಾಟಿಸಿದರು.

ಇಂಧನ ಘಟಕಗಳು (ಎಎಫ್​ಎಸ್) ಮೇಕ್ ಇನ್ ಇಂಡಿಯಾಗೆ ಪೂರಕವಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿವೆ ಎಂದು ಸಚಿವ ಧಮೇಂದ್ರ ಪ್ರಧಾನ್ ವಿಶ್ವಾಸ ವ್ಯಕ್ತಪಡಿಸಿದರು.

ಐಒಸಿಯ ಮಾರುಕಟ್ಟೆ ನಿರ್ದೇಶಕ ಬಿ.ಎಸ್. ಕಾಂತ ಮಾತನಾಡಿ, ನೂರು ಎಎಫ್​ಎಸ್​ಗಳ ಪೈಕಿ ಒಡಿಶಾದಲ್ಲಿ 2 ನಿಲ್ದಾಣಗಳಿವೆ. ಪ್ರಾದೇಶಿಕ ಅಭಿವೃದ್ಧಿಯಲ್ಲಿ ಇವುಗಳ ಪಾತ್ರ ಮಹತ್ವದ್ದಾಗಿದೆ. ಇವುಗಳಿಂದಾಗಿ ವಾಣಿಜ್ಯ ವಿಮಾನಯಾನಕ್ಕೂ ಉತ್ತೇಜನ ದೊರೆಯಲಿದೆ. ಪೂರ್ವ ಭಾರತದ ಭಾಗಕ್ಕೂ ವಾಣಿಜ್ಯಾತ್ಮಕ ವಲಯ ಎಂಬ ಹೆಗ್ಗಳಿಕೆ ದೊರೆಯಲಿದೆ ಎಂದರು. ಭೂ ಸಾರಿಗೆ ಇಂಧನ ಪೂರೈಕೆಯಲ್ಲಿ ಹೆಗ್ಗಳಿಕೆ ಪಡೆದಿರುವ ಐಒಸಿ, ವೈಮಾನಿಕ ಇಂಧನ ಪೂರೈಕೆಯಲ್ಲೂ ತನ್ನ ಛಾಪು ಮೂಡಿಸುತ್ತಿದೆ. ಅದರ ಭಾಗವಾಗಿ ಒಡಿಶಾದಲ್ಲಿ ಈ ಕೇಂದ್ರ ಸ್ಥಾಪನೆಯಾಗಿದೆ.

ಕೇಂದ್ರ ಸಚಿವರಾದ ಮನೋಜ್ ಸಿನ್ಹಾ, ಜುವಲ್ ಓರಂ, ಸ್ಥಳೀಯ ಶಾಸಕ ದಿಲೀಪ್​ಕುಮಾರ್, ಐಒಸಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಇಂದ್ರಜಿತ್ ಬೋಸ್, ಟಿ.ಎಸ್. ಖ್ವಾಜಾ, ಗೌತಮ್ ಬೋಸ್ ಉಪಸ್ಥಿತರಿದ್ದರು.

Write A Comment