
ಮೈಸೂರು: ಗಂಡನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಕ್ಕೆ ತಂಗಿಯೇ ಅಕ್ಕನನ್ನು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚು ಕೊಂದ ಘಟನೆ ಮೈಸೂರು ತಾಲೂಕಿನ ವಾಜಮಂಗಲದಲ್ಲಿ ನಡೆದಿದೆ.
ಪುಟ್ಟವೆಂಕಟಮ್ಮ (30) ಕೊಲೆಯಾಗಿದ್ದು, ತಂಗಿ ಪಲ್ಲವಿ(25)ಯನ್ನು ಪೊಲೀಸರು ಬಂಧಿಸಿದ್ದಾರೆ. ಪುಟ್ಟ ವೆಂಕಟಮ್ಮ ಗಂಡನನ್ನು ಬಿಟ್ಟು ತವರು ಮನೆಯಲ್ಲಿ ಇದ್ದರು. ತವರು ಮನೆಯಲ್ಲಿ ತಂಗಿ ಗಂಡ ಮಲ್ಲೇಶ್ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು.
ಈ ವಿಚಾರದ ಬಗ್ಗೆ ಸಾಕಷ್ಟು ಗಲಾಟೆಗಳು ಇಬ್ಬರ ನಡುವೆ ನಡೆದಿತ್ತು. ಶುಕ್ರವಾರ ಈ ವಿಚಾರದ ಬಗ್ಗೆ ಗಲಾಟೆ ನಡೆದು ಸಿಟ್ಟಿಗೆದ್ದ ಪಲ್ಲವಿ ಪುಟ್ಟವೆಂಕಟಮ್ಮ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಾಕಿದ್ದಳು. ಬೆಂಕಿ ಹಾಕಿದ ವಿಚಾರದ ಗೊತ್ತಾಗಿ ಮನೆಯವರು ಕೂಡಲೇ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪುಟ್ಟವೆಂಕಟಮ್ಮ ಸಾವನ್ನಪ್ಪಿದ್ದಾರೆ.