ಕರ್ನಾಟಕ

ಸಚಿವ ಡಿಕೆಶಿಗೆ ಬೆದರಿಕೆ

Pinterest LinkedIn Tumblr

dkcಬೆಂಗಳೂರು, ಮಾ. ೧- ಕಳೆದ ಮೂರು ದಿನಗಳಿಂದ ಬಿಜೆಪಿ ಕಾರ್ಯಕರ್ತನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಹೇಳಿದರು.

ವಿದ್ಯುತ್ ಸರಿಯಿಲ್ಲದ್ದಿದ್ದರೆ 1912ಗೆ ಕರೆ ಮಾಡಿದರೆ ತಕ್ಷಣ ಇಲಾಖಾಧಿಕಾರಿಗಳು ತಕ್ಷಣ ಸ್ಪಂದಿಸುವ ಕೆಲಸ ಮಾಡುತ್ತಾರೆ. ಆದರೆ, ವ್ಯಕ್ತಿ ಸೊಂಟದ ಕೆಳಗಿನ ಭಾಷೆ ಬಳಸಿ ಬೆದರಿಕೆ ಹಾಕುತ್ತಿದ್ದಾನೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿರುವುದಾಗಿ ಅವರು ಹೇಳಿದರು.

ವಿಧಾನಪರಿಷತ್‌ನ ಮೊಗಸಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ಬಿಜೆಪಿ ಕಾರ್ಯಕರ್ತನಿಂದ ಬೆದರಿಕೆ ಇದ್ದು, ಈ ಬಗ್ಗೆ ತನಿಖೆ ನಡೆಸಿ ಆತನನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ ಎಂದರು.

ತಮಗೆ ಬೆದರಿಕೆ ಕರೆ ಹಾಕಿದ್ದು ಅಲ್ಲದೆ, ಕಳೆದ ಆರು ತಿಂಗಳಿಂದಲೂ ಇಲಾಖಾಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾನೆ. ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ ಎಂದರು.

ಆತನ ಕುಟುಂಬದ ಸದಸ್ಯರು ತಮ್ಮನ್ನು ಸಂಪರ್ಕಿಸಿ ಯಾವುದೇ ದೂರು ನೀಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ, ಕಳೆದ ಆರು ತಿಂಗಳಿಂದ ಇಲಾಖಾಧಿಕಾರಿಗಳು ಹಾಗೂ ಇತ್ತೀಚೆಗೆ ತಮ್ಮ ಮೇಲೆ ನಿಂದನೆ ಮಾಡಿ ಬೆದರಿಕೆ ಹಾಕುತ್ತಿದ್ದಾನೆ. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರಿಗೆ ದೂರು ನೀಡಿರುವುದಾಗಿ ಹೇಳಿದರು.

Write A Comment