ಕರ್ನಾಟಕ

ಕಳಸಾ-ಬಂಡೂರಿ ವಿವಾದ : ಪ್ರಧಾನಿ ಮಧ್ಯಸ್ಥಿಕೆಗೆ ನಿರ್ದೇಶಕ ನಾಗಾಭರಣ ಒತ್ತಾಯ

Pinterest LinkedIn Tumblr

nagaನರಗುಂದ, ಮಾ.1- ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನ ಕುರಿತಂತೆ ಪ್ರಧಾನಿ ನರೇಂದ್ರಮೋದಿ ಅವರು ಶೀಘ್ರ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ಮುಖ್ಯಮಂತ್ರಿಗಳ ಸಭೆ ಕರೆದು ವಿವಾದಕ್ಕೆ ಪರಿಹಾರ ಕಂಡುಹಿಡಿಯಬೇಕೆಂದು ಚಲನಚಿತ್ರ ನಿರ್ದೇಶಕ ಟಿ.ಎನ್.ನಾಗಾಭರಣ ಒತ್ತಾಯಿಸಿದರು.

ನಿನ್ನೆ ನರಗುಂದದಲ್ಲಿ ರೈತರ ಹೋರಾಟಕ್ಕೆ ಬೆಂಬಲಿಸಿ ಮಾತನಾಡಿದ ಅವರು, ಕಳೆದ ಏಳು ತಿಂಗಳಿನಿಂದ ರೈತರು ತಮ್ಮ ಹಕ್ಕಿನ ನೀರನ್ನು ಪಡೆಯಲು ಹೋರಾಟ ಮಾಡುತ್ತಿರುವುದು ದುರ್ದೈವದ ಸಂಗತಿ. ಈ ಕೂಡಲೇ ಪ್ರಧಾನಿ ಮಧ್ಯ ಪ್ರವೇಶಿಸಬೇಕೆಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೊದಲ ಬಾರಿಗೆ ನರಗುಂದ ತಾಲೂಕಿನವರು ಜಿಪಂ, ತಾಪಂ ಚುನಾವಣೆಯಲ್ಲಿ ನೋಟಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿ ಇತಿಹಾಸ ಸೃಷ್ಟಿಸಿದ್ದಾರೆ ಎಂದರು. ನ್ಯಾಯ ಸಿಗುವವರೆಗೆ ಹೋರಾಟ ಮಾಡಿರಿ. ನಿಮ್ಮ ಬೆಂಬಲಕ್ಕೆ ಚಿತ್ರರಂಗವಿದೆ ಎಂದು ಭರವಸೆ ನೀಡಿದರು.

Write A Comment