ಕರ್ನಾಟಕ

‘ವಾಟ್ಸಪ್‌ ಲವ್!’ ಮಡಿಕೇರಿ ಸೇರಿದಂತೆ ಹಲವು ಸುಂದರ ತಾಣಗಳಲ್ಲಿ ಸ್ಥಳಗಳಲ್ಲಿ ಚಿತ್ರೀಕರಣ

Pinterest LinkedIn Tumblr

wats

‘ಆಗ ಪತ್ರ, ಫೋನ್ ಮೂಲಕ ಪ್ರೀತಿ ಶುರುವಾಗುತ್ತಿತ್ತು. ಈಗೆಲ್ಲ ಫೇಸ್‌ಬುಕ್– ವಾಟ್ಸಪ್‌ ಕಾಲ’ ಎಂದು ಹೋಲಿಕೆ ಮಾಡಿದ ನಾಯಕ ನಟ ಜೀವ, ತಮ್ಮ ಸಿನಿಮಾ ‘ವಾಟ್ಸಪ್‌ ಲವ್’ಗೆ ಪ್ರೇರಣೆ ನೀಡಿದ ಎಳೆಯನ್ನು ಬಿಚ್ಚಿಟ್ಟರು. ಆಧುನಿಕ ಸಂಪರ್ಕ ಸಾಧನಗಳು ಎಲ್ಲರನ್ನೂ ಹತ್ತಿರ ತಂದಿವೆ. ಹಾಗೆಂದು ಅದರಿಂದ ಎಲ್ಲ ಸರಿಯಾಗಿದೆ ಎಂದೇನಿಲ್ಲ. ಆ ಕುರಿತ ಕಥೆ ಅವರ ಸಿನಿಮಾದಲ್ಲಿದೆ.

ಜೀವ ಅವರಿಗೆ ಸಿನಿಮಾ ಲೋಕ ಹೊಸತೇನಲ್ಲ. ಈ ಹಿಂದೆ ‘ಸುಂದರ ಸ್ವಪ್ನಗಳು’ ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದರು. ನಾಯಕನಾಗಿ ಇದು ಅವರ ಮೊದಲ ಸಿನಿಮಾ. ಅಂದಹಾಗೆ ಇದರ ನಿರ್ಮಾಪಕರೂ ಅವರೇ. ‘ನಾನು ನಿರ್ಮಾಪಕನಾಗಿದ್ದು ತೀರಾ ಆಕಸ್ಮಿಕವಾಗಿ. ಕೆಲವರು ಈ ಚಿತ್ರಕ್ಕೆ ಬಂಡವಾಳ ಹಾಕಲು ಮುಂದೆ ಬಂದರು. ಆದರೆ ಯಾವುದೋ ಅನಿವಾರ್ಯ ಕಾರಣಗಳಿಂದ ಹಿಂದಕ್ಕೆ ಸರಿದರು. ಕಥೆ ಚೆನ್ನಾಗಿದ್ದರೂ ನಿರ್ಮಾಪಕರಿಲ್ಲದೇ ನಿಲ್ಲಬಾರದು ಎಂಬ ಉದ್ದೇಶದಿಂದ ನಾನೇ ನಿರ್ಮಾಣಕ್ಕೆ ಇಳಿದೆ’ ಎಂದು ಜೀವ ಹೇಳಿಕೊಂಡರು.

ಈಗಾಗಲೇ ಕೆಲವು ಸಿನಿಮಾಗಳಲ್ಲಿ ಗಮನ ಸೆಳೆದಿರುವ ಐಶ್ವರ್ಯ ಸಿಂಧೋಗಿ ಈ ಸಿನಿಮಾದಲ್ಲಿ ಕಾಲೇಜು ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ‘ಈಗಿನ ಜಮಾನಾಕ್ಕೆ ತಕ್ಕಂತೆ ಶೀರ್ಷಿಕೆ ಇದೆ. ಯುವಪ್ರೇಕ್ಷಕರನ್ನು ಸೆಳೆಯಲು ಇದು ನೆರವಾಗುತ್ತದೆ. ರೊಮಾನ್ಸ್ ಹಾಗೂ ಭಾವನೆಗಳು ಬೆರೆತ ಚಿತ್ರವಿದು’ ಎಂದವರು ಬಣ್ಣಿಸಿದರು.

ಹಲವು ನಿರ್ದೇಶಕರ ಬಳಿ ಸಹಾಯಕನಾಗಿ ಕೆಲಸ ಮಾಡಿರುವ ರಾಮು, ‘ವಾಟ್ಸಪ್…’ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಬಡ್ತಿ ಪಡೆದಿದ್ದಾರೆ. ಚಿತ್ರದಲ್ಲಿನ ಐದು ಹಾಡುಗಳಿಗೆ ಹೇಮಂತ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಐಟಂ ಸಾಂಗ್‌ಗೆ ಅಲಿಶಾ ಹೆಜ್ಜೆ ಹಾಕಿದ್ದಾರೆ. ಚಿಕ್ಕಣ್ಣ ಹಾಗೂ ಕೆಂಪೇಗೌಡ ಹಾಸ್ಯಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಡಿಕೇರಿ ಸೇರಿದಂತೆ ಹಲವು ಸುಂದರ ತಾಣಗಳಲ್ಲಿ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಶ್ರೀಕಿ, ಶ್ರಾವ್ಯ ರಾವ್, ಮಮತಾ ರಾವತ್, ತಿಲಕ್ ಹಾಗೂ ಸಂಗೀತಾ ತಾರಾಗಣದಲ್ಲಿದ್ದಾರೆ. ‘ಜೀವನ ಎನ್ನುವುದು ಸುಂದರ ಪ್ರಯಾಣ’ ಎಂಬ ಟ್ಯಾಗ್‌ಲೈನ್ ಹೊಂದಿರುವ ‘ವಾಟ್ಸಪ್ ಲವ್’ ಚಿತ್ರವು ಇದೇ ಶುಕ್ರವಾರ (ಫೆ. 26) ರಾಜ್ಯದ ಸುಮಾರು 50 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

Write A Comment