ಕರ್ನಾಟಕ

ಕೊನೆಗೂ ಸಿಎಂ ದುಬಾರಿ ವಾಚ್ ರಹಸ್ಯವನ್ನು ಬಯಲು ಮಾಡಿದ್ರು

Pinterest LinkedIn Tumblr

watch-cm

ಬೆಂಗಳೂರು: ದುಬಾರಿ ವಾಚ್ ಬಗ್ಗೆ ಹಲವು ದಿನಗಳಿಂದ ಎದ್ದಿದ್ದ ಎಲ್ಲಾ ವಿವಾದಗಳಿಗೆ ಸಿಎಂ ಸಿದ್ದರಾಮಯ್ಯ ತೆರೆ ಎಳೆಯಲು ಮುಂದಾಗಿದ್ದಾರೆ. ತಾವು ಕಟ್ಟಿದ್ದ ವಾಚ್ ಅನ್ನು ತಮಗೆ ಯಾರು ನೀಡಿದ್ದರು ಎಂಬುದರ ಬಗ್ಗೆ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.

ಬೆಂಗಳೂರಿನ ತಮ್ಮ ಗೃಹ ಕಚೇರಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕೇರಳ ಮೂಲದವರಾದ ತಮ್ಮ ಸ್ನೇಹಿತ ಡಾ. ಗಿರೀಶ್ ಚಂದ್ರ ವರ್ಮಾ ತಮಗೆ ವಾಚ್ ಅನ್ನು ಉಡುಗೊರೆಯಾಗಿ ನೀಡಿದ್ದಾಗಿ ಹೇಳಿದ್ದಾರೆ. ದುಬೈನಲ್ಲಿರುವ ಡಾ. ಗಿರೀಶ್ ಚಂದ್ರ ವರ್ಮಾ ಕಳೆದ ಜುಲೈ ನಲ್ಲಿ ಬೆಂಗಳೂರಿಗೆ ಬಂದಿದ್ದರು. ಆ ವೇಳೆ ತಾವು ಕಟ್ಟಿದ್ದ ವಾಚ್ ಅನ್ನು ತಮಗೆ ಗಿಫ್ಟ್ ಆಗಿ ನೀಡಿದ್ದರು ಎಂದು ಹೇಳಿದ್ದಾರೆ. ದುಬೈ ನಲ್ಲಿ ಈ ವಾಚ್ ಮೌಲ್ಯ 75 ಸಾವಿರ ರು. ಇಲ್ಲಿ ಇದರ ಬೆಲೆ 8 ಲಕ್ಷ ರು ಆಗಿದೆ ಎಂದು ಸಿಎಂ ಹೇಳಿದ್ದಾರೆ.

ನಾನೆಂದೂ ಐಷಾರಾಮಿ ಜೀವನ ನಡೆಸಿದವನಲ್ಲ. ನನ್ನ ಕುಟುಂಬದವರು ಕೂಡ ಯಾರು ಐಷಾರಾಮಿ ಬದುಕು ನಡೆಸುವುದಿಲ್ಲ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.

1983 ರಿಂದಲೂ ಗಿರೀಶ್ ವರ್ಮಾ ತಮ್ಮ ಸ್ನೇಹಿತರಾಗಿದ್ದಾರೆ ಎಂದು ಹೇಳಿದ್ದಾರೆ.ವಾಚ್ ಬಗ್ಗೆ ತಮ್ಮ ಸ್ನೇಹಿತ ಈಗಾಗಲೇ ಅಪ್ ಡೇವಿಟ್ ಮಾಡಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸುವುದಾಗಿಯೂ ಕೂಡ ಸಿಎಂ ಹೇಳಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಕುಮಾರ ಸ್ವಾಮಿ, ಸಿಎಂ ಸಿದ್ದರಾಮಯ್ಯ ಕಾನೂನು ಸಲಹೆಗಾರರ ಸಲಹೆ ಪಡೆದು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಸ್ನೇಹಿತ ಗಿಫ್ಟ್ ನೀಡಿದ್ದರು ಎಂದು ಅಂದು ಹೇಳಿದ್ದ ಸಿಎಂ, ಆವತ್ತೆ ಇದನ್ನು ಯಾರು ನೀಡಿದರು ಎಂದು ಹೆಸರು ತಿಳಿಸಬಹುದಿತ್ತು, ಸಿಎಂ ಸ್ಪಷ್ಟನೆ ಬಗ್ಗೆ ನನಗೆ ಸಂದೇಹ ವಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Write A Comment