ಕರ್ನಾಟಕ

ಬೆಂಗಳೂರಿನಲ್ಲಿ ಯುವತಿಯ ಸಜೀವ ದಹನಕ್ಕೆ ಯತ್ನಿಸಿದ ಯುವಕ

Pinterest LinkedIn Tumblr

burn_bengaluru

ಬೆಂಗಳೂರು: ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ಯುವಕನೊಬ್ಬ ಜೀವಂತವಾಗಿ ಸುಡಲು ಯತ್ನಿಸಿದ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಮಂಗಳವಾರ ನಡೆದಿದೆ.

25 ವರ್ಷದ ಅರುಣ್ ಮತ್ತು 19 ವರ್ಷದ ಮಾರಿಯಾ ಪರಸ್ಪರ ಇಷ್ಟಪಟ್ಟಿದ್ದರು. ಆದರೆ, ಅರಣ್ ಈಗಾಗಲೇ ಎರಡು ಮದುವೆಯಾಗಿದ್ದ ವಿಷಯ ಇತ್ತೀಚೆಗೆ ಮಾರಿಯಾಗೆ ತಿಳಿದಿದೆ. ಈ ಹಿನ್ನಲೆಯಲ್ಲಿ ಅರುಣ್ ನನ್ನು ಮದುವೆಯಾಗಲು ಮಾರಿಯಾ ನಿರಾಕರಿಸಿದ್ದಾಳೆ.

ಸೋಮವಾರ ರಾತ್ರಿ ಮಾರಿಯಾ ಮನೆಗೆ ತೆರಳಿದ ಅರುಣ್ ತನ್ನನ್ನು ಮದುವೆಯಾಗು ಎಂದು ಒತ್ತಾಯಿಸಿದ್ದಾನೆ. ಆಗ ಅವ್ಯಾಚ ಶಬ್ದಗಳಲ್ಲಿ ನಿಂದಿಸಿದ ಮಾರಿಯಾ, ನೀನು ಈಗಾಗಲೇ ಎರಡು ಮದುವೆಯಾಗಿರುವ ಸತ್ಯ ನನಗೆ ಗೋತ್ತಾಗಿದೆ. ಹಾಗಾಗಿ, ನಾನು ನಿನ್ನ ಮದುವೆಯಾಗುವುದಿಲ್ಲ ಎಂದು ಹೇಳಿದ್ದಾಳೆ.

ಇದರಿಂದ ಕುಪಿತನಾದ ಅರಣ್, ನಿನ್ನೆ ಮಾರಿಯಾ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ಸುಡಲು ಯತ್ನಿಸಿದ್ದಾನೆ. ಮಾರಿಯಾಗೆ ಶೇ.30ರಷ್ಟು ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Write A Comment