ಅಂತರಾಷ್ಟ್ರೀಯ

ಸ್ನಿಕರ್ಸ್ ಚಾಕಲೇಟ್‌ನಲ್ಲಿ ಪ್ಲಾಸ್ಟಿಕ್ ಪತ್ತೆ!

Pinterest LinkedIn Tumblr

Snickers bar

ಲಂಡನ್:ಸ್ನಿಕರ್ಸ್ ಚಾಕಲೇಟ್‌ನಲ್ಲಿ ಪ್ಲಾಸ್ಟಿಕ್ ಪತ್ತೆಯಾದ ಹಿನ್ನಲೆಯಲ್ಲಿ ಮಾರ್ಸ್ ಇಂಕ್ ಕಂಪನಿ 55 ರಾಷ್ಟ್ರಗಳಲ್ಲಿ ತಮ್ಮ ಉತ್ಪನ್ನಗಳನ್ನು ವಾಪಸ್ ಪಡೆದುಕೊಂಡಿದೆ.

ಜರ್ಮನಿಯಲ್ಲಿ ಸ್ನಿಕರ್ಸ್ ಬಾರ್ ಚಾಕಲೇಟ್‌ನಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿತ್ತು. ಈಗಾಗಲೇ ಮುಖ್ಯವಾಗಿ ಯುರೋಪ್ ರಾಷ್ಟ್ರಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರ್ಸ್ ಇಂಕ್ ವಾಪಸ್ ಪಡೆದಿದೆ.

ವೇಗೆಲ್‌ನ ಡಚ್ ಫ್ಯಾಕ್ಟರಿಯಲ್ಲಿ ತಯಾರಿಸಿದ್ದ ಮಾರ್ಸ್, ಸ್ನಿಕರ್ಸ್, ಮಿಲ್ಕೀ ವೇ ಬಾರ್ಸ್ ಮೊದಲಾದ ಚಾಕಲೇಟ್‌ಗಳನ್ನು ವಾಪಸ್ ಪಡೆಯಲಾಗಿದೆ ಎಂದು ಮಾರ್ಸ್ ಕಂಪನಿ ವಕ್ತಾರೆ ಹೇಳಿದ್ದಾರೆ. ಇಲ್ಲಿ ತಯಾರಿಸಲ್ಪಟ್ಟ ಚಾಕಲೇಟ್‌ಗಳು ಜರ್ಮನಿ, ಫ್ರಾನ್ಸ್ , ಬ್ರಿಟನ್ ಸೇರಿದಂತೆ ಏಷ್ಯಾದ ಹಲವೆಡೆ ಸರಬರಾಜು ಆಗಿತ್ತು.

ಜರ್ಮನಿಯಲ್ಲಿ ಜ. 8ರಂದು ಗ್ರಾಹಕರೊಬ್ಬರು ಸ್ನಿಕರ್ಸ್ನಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿರುವುದಾಗಿ ದೂರು ನೀಡಿದ್ದರು.
ನಾವು ನಮ್ಮ ಯಾವುದೇ ಉತ್ಪನ್ನಗಳಲ್ಲಿ ಗುಣಮಟ್ಟದ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಆದ್ದರಿಂದಲೇ ಎಲ್ಲ ಉತ್ಪನ್ನಗಳನ್ನು ವಾಪಸ್ ಪಡೆಯಲು ನಿರ್ಧರಿಸಲಾಗಿದೆ ಎಂದು ವಕ್ತಾರೆ ಹೇಳಿದ್ದಾರೆ.

Write A Comment