ಕರ್ನಾಟಕ

ತುಮಕೂರು ತಾ.ಪ. ಬಿಜೆಪಿ ತೆಕ್ಕೆಗೆ ಡಾ. ಜಿ.ಪಿ.ಗೆ ಮುಖಭಂಗ

Pinterest LinkedIn Tumblr

Parameshwar-14ಬೆಂಗಳೂರು, ಫೆ. ೨೩- ತುಮಕೂರು ತಾಲ್ಲೂಕು ಪಂಚಾಯಿತಿ ಬಿಜೆಪಿ ಪಾಲಾಗಿದ್ದು, ಇದರಿಂದ ಗೃಹಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಶಾಸಕ ಕೆ.ಎನ್. ರಾಜಣ್ಣರವರು ಭಾರಿ ಮುಖಭಂಗ ಅನುಭವಿಸಿದ್ದಾರೆ.

ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದೆ. ಕೇವಲ ಒಂದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ.

ಬಿಜೆಪಿ 17 ಕ್ಷೇತಗಳಲ್ಲಿ ಜಯ ಸಾಧಿಸಿ ವಿಜಯದ ನಗೆ ಬೀರಿದೆ.

ಗೆಲುವಿನ ನಾಗಾಲೋಟದಲ್ಲಿ ಜೆಡಿಎಸ್ ಕೂಡ ಹಿಂದೆ ಬಿದ್ದಿಲ್ಲ. 12 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಪಡೆದಿದ್ದಾರೆ.

Write A Comment