ದಾಬಸ್‌ಪೇಟೆ, ಫೆ.21- ಸಾವನದುರ್ಗ ಬೆಟ್ಟದ ಮೂಲಕ ಶಿವಗಂಗೆಯ ಮಾರ್ಗವಾಗಿ ತುಮಕೂರು ತಾಲೂಕಿಗೆ ತೆರಳಿದ್ದ ನಾಲ್ಕು ಕಾಡಾನೆಗಳು ಮತ್ತೆ ಶಿವಗಂಗೆ ಭಾಗದಲ್ಲಿರುವ ಕಂಬಾಳು, ಗೊಲ್ಲರಹಟ್ಟಿ, ಗ್ರಾಮಗಳ ರೈತರು ಬೆಳೆದ ಬೆಳೆಗಳನ್ನು ಹಾಳು ಮಾಡಿವೆ. ಕಂಬಾಳು ಹಾಗೂ ಗೊಲ್ಲರಹಟ್ಟಿ ಗ್ರಾಮದ ರೈತರು ಬೆಳೆದಿದ್ದ ಅಡಿಕೆ, ತೆಂಗು, ಮಾವು, ರಾಗಿ, ಹುರುಳಿ, ಸೌತೆ ಸೇರಿದಂತೆ ಇತರೆ ಬೆಳೆಗಳನ್ನು ನಾಶಪಡಿಸಿವೆ.
ಮೂರು ಆನೆಗಳು ಈಗ ಮಾಗಡಿ ತಾಲೂಕಿನ ಅದರಂಗಿ ಅರಣ್ಯದಲ್ಲಿ ಬೀಡು ಬಿಟ್ಟಿವೆ. ತುಮಕೂರು ಬಳಿ ವ್ಯಕ್ತಿಯೊಬ್ಬನನ್ನು ಸಾಯಿಸಿದ ಮತ್ತೊಂದು ಒಂಟಿ ಪುಂಡ ಆನೆ ಸೋಂಪುರ ಹೋಬಳಿಯ ಹಳೆ ನಿಜಗಲ್ ಬಳಿ ಇದೆ ಎನ್ನುತ್ತಾರೆ ಅರಣ್ಯಅಕಾರಿ ವನಿತಾ.