ಕರ್ನಾಟಕ

ಹೆಲ್ಫ್ ಮಿ ಸುದೀಪ್…ನಿರ್ಮಾಪಕ ಶಶಿಕುಮಾರ್ ಆತ್ಮಹತ್ಯೆಗೆ ಯತ್ನ

Pinterest LinkedIn Tumblr

-half-mentlu-articleಬೆಂಗಳೂರು: ಕಳೆದ ಒಂದೂವರೆ ವರ್ಷದಿಂದ ಸಿನಿಮಾ ಬಿಡುಗಡೆಗೆ ಸಹಕಾರ ಸಿಗಲಿಲ್ಲ ಹಾಗೂ ಸಾಲಬಾಧೆ ತಾಳಲಾರದೆ ಹಾಫ್ ಮೆಂಟ್ಲು ಚಿತ್ರದ ನಿರ್ಮಾಪಕ ಶಶಿಕುಮಾರ್ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಲ್ಲಿ ನಡೆದಿದೆ.

ನಗರದ ಕಾಮಾಕ್ಷಿಪಾಳ್ಯದಲ್ಲಿರುವ ತಮ್ಮ ನಿವಾಸದಲ್ಲಿ ನಿರ್ಮಾಪಕ ಶಶಿಕುಮಾರ್  ಶುಕ್ರವಾರ ವಿಷಸೇವಿಸಿದ್ದರು. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಟ ಸುದೀಪ್ ಅವರ ಅಭಿಮಾನಿಯಾಗಿರುವ ನಿರ್ಮಾಪಕ ಶಶಿಕುಮಾರ್ ಸುಮಾರು 3.25 ಕೋಟಿ ರೂಪಾಯಿ ಸಾಲ ಮಾಡಿ ಹಾಫ್ ಮೆಂಟ್ಲು ಸಿನಿಮಾ ನಿರ್ಮಿಸಿದ್ದರು. ಆದರೆ ಕಳೆದ ಒಂದೂವರೆ ವರ್ಷದಿಂದ ಸಿನಿಮಾ ಮಾಡಲು ಡಿಸ್ಟ್ರಿಬ್ಯೂಟರ್ ಸಿಗಲಿಲ್ಲ. ಚಿತ್ರ ರಿಲೀಸ್ ಗೂ ಸುಮಾರು 70ರಿಂದ 80 ಲಕ್ಷ ರೂಪಾಯಿ ಬೇಕು. ಹಾಗಾಗಿ ಸಿನಿಮಾ ಬಿಡುಗಡೆಯಾಗದಿದ್ದರಿಂದ ಬೇಸತ್ತು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ನಾನು ನಿಮ್ಮ (ಕಿಚ್ಚ ಸುದೀಪ್) ಅಭಿಮಾನಿ. ನನ್ನ ಸಿನಿಮಾ ಬಿಡುಗಡೆಗೆ ನೀವೇ ಸಹಾಯ ಮಾಡಬೇಕು. ನನ್ನ ಸಾವಿನಿಂದಾದರೂ ಹಾಫ್ ಮೆಂಟ್ಲು ಚಿತ್ರ ಬಿಡುಗಡೆಯಾಗಬಹುದೆಂಬ ಆಸೆ ನನ್ನದು ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಿರ್ಮಾಪಕ ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
-ಉದಯವಾಣಿ

Write A Comment