
ದುಬೈ: ತುಳು ಭಾಷೆಗೆ ತನ್ನದೇ ಆದ ಕಾಣಿಕೆಯನ್ನು ನೀಡುತ್ತಾ ಬಂದಿರುವ ದುಬೈಯ ‘ನಮ ತುಳುವೆರ್’ ಬಳಗವು ಮಾರ್ಚ್ 4ರಂದು ಸಂಜೆ 6 ಗಂಟೆಗೆ ದುಬೈಯ ಶೈಖ್ ರಾಶಿದ್ ಅಡಿಟೋರಿಯಂನಲ್ಲಿ ಕಾಪು ರಂಗ ತರಂಗ ತಂಡದವರ 100ಕ್ಕಿಂತಲೂ ಅಧಿಕ ಪ್ರದರ್ಶನ ಕಂಡ ‘ದುಂಬು ಪಿರ’ ತುಳು ಹಾಸ್ಯಮಯ ನಾಟಕವನ್ನು ಆಯೋಜಿಸಿದೆ.
ಈ ಹಿನ್ನೆಲೆಯಲ್ಲಿ ನಾಟಕದ ಟಿಕೆಟ್ ಬಿಡುಗಡೆ ಕಾರ್ಯಕ್ರಮವನ್ನು ದುಬೈ ಕಿಸೆಸ್‌ನ ಫೋರ್ಚುನ್ ಪ್ಲಾಝಾ ಹೊಟೇಲ್‌ನಲ್ಲಿ ಬುಧವಾರ ಏರ್ಪಡಿಸಲಾಗಿತ್ತು.









ಸರಳ ಸಮಾರಂಭವನ್ನು ಫೋರ್ಚುನ್ ಪ್ಲಾಝಾ ಗ್ರೂಪ್ ಆಫ್ ಹೊಟೇಲ್ಸ್‌ನ ಮಾಲಕ ಪ್ರವೀಣ್ ಶೆಟ್ಟಿ, ಉದ್ಯಮಿ ಹರೀಶ್ ಬಂಗೇರಾ, ಯಕ್ಷಗಾನ ಕಲಾವಿದ ಪ್ರಭಾಕರ್ ಸುವರ್ಣ,ಪುರುಷೋತ್ತಮ ಪೂಜಾರಿ, ಮಂಗಳೂರು ಕೊಂಕಣ್ಸ್ ಅಧ್ಯಕ್ಷರಾದ ಅಲ್ವಿನ್ ಪಿಂಟೋ, ಬಿಲ್ಲವಾಸ್ ದುಬಯಿಯ ಸತೀಶ್ ಪೂಜಾರಿ, ನ್ಯೂ ಮಾರ್ಕ್‌ನ ನೋವೆಲ್ ಅಲ್ಮೇಡಾ ದೀಪ ಬೆಳಗಿಸಿ ಉದ್ಘಾಟಿಸಿದರು.
ನಾಟಕದ ರೂಪುರೇಷೆಗಳ ಕುರಿತು ನಮ ತುಳುವೆರ್ ಬಳಗದ ದೀಪಕ್ ಎಸ್.ಪಿ. ಹಾಗೂ ಅಜ್ಮಲ್ ಸೈಯ್ಯದ್ ಮಾತನಾಡಿದರು.
ನಾಟಕದ ಆಮಂತ್ರಣ ಪತ್ರಿಕೆಯನ್ನು ಉದ್ಯಮಿ ಹರೀಶ್ ಬಂಗೇರ ಬಿಡುಗಡೆಗೊಳಿಸಿದರು. ಪ್ರವೀಣ್ ಕುಮಾರ್ ಶೆಟ್ಟಿಯವರು ಟಿಕೆಟನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.ಬಿಲ್ಲವಾಸ್‌ನ ಸತೀಶ್ ಪೂಜಾರಿಯವರು ಪ್ರಥಮ ಟಿಕೆಟನ್ನು ಖರೀದಿಸಿ,ನಮ ತುಳುವೆರ್ ಮಾಡುತ್ತಿರುವ ಉತ್ತಮ ಕೆಲಸವನ್ನು ನೆನಪಿಸಿ ಶುಭ ಹಾರೈಸಿದರು.
ಸಮಾಜ ರತ್ನ ವಿಜೇತ ಲೀಲಾಧರ್ ಶೆಟ್ಟಿ ಕಾಪು ಇವರ ತಂಡದಲ್ಲಿ ಬಲೆ ತೆಲಿಪಾಲೆ ತಂಡದಲ್ಲಿ ಹ್ಯಾಟ್ರಿಕ್ ವಿಜಯಿಯಾದ ಪ್ರಶಂಸ ತಂಡದ ಕುಸಾಲ್ದ ಬಿರ್ಸೆ ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಬೈಲೂರು, ಮರ್ವಿನ್ ಶಿರ್ವ ರಂಥ ಕಲಾವಿದರು ಈ ತಂಡದಲ್ಲಿದ್ದಾರೆ. ಈ ನಾಟಕ ರಚನೆ ಶ್ಯಾಮ್ ಕುಮಾರ್ ಚಿತ್ರಪುರ, ನಿರ್ದೇಶನ ಶಿವ ಪ್ರಕಾಶ್ ಪೂಂಜ ಮಾಡಿದ್ದಾರೆ. ಈ ನಾಟಕಕ್ಕೆ ಸಂಗೀತವನ್ನು ಬಲೆ ತೆಲಿಪಾಲೆ ಖ್ಯಾತಿಯ ಶರತ್ ಉಚ್ಚಿಲ ನೀಡಿದ್ದಾರೆ. ಪತ್ರಕರ್ತ ವಿನಯ್ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಟಿಕೆಟ್ ಗಾಗಿ: ಅಬುಧಾಬಿ-ಸರ್ವೋತ್ತಮ ಶೆಟ್ಟಿ 050 6125464
ಮನೋಹರ್ ತೋನ್ಸೆ-050 5212079
ಭಾಸ್ಕರ್ ಶೆಟ್ಟಿ-050 4434981
ದುಬೈ-ದೇವದಾಸ್ 055 8898655
ಪ್ರೇಮ್-050 6783964
ಅಶೋಕ್ ಶೆಟ್ಟಿ-0569 242740
ಶಾರ್ಜಾ-ಹರಿ 050 7471969
ಟಿಕೆಟ್ ದೊರೆಯುವ ಸ್ಥಳ: ನ್ಯೂ ಲಕ್ಕ್ ರೆಸ್ಟೋರೆಂಟ್ ಅಲ್‌ಕೂಸ್, ವೀನಸ್ ರೆಸ್ಟೋರೆಂಟ್ ಕರಾಮ-ಅಲ್‌ಕಿಸೆಸ್. ಸ್ವಾದಿಷ್ಟ ರೆಸ್ಟೋರೆಂಟ್ ಕರಾಮ, ವುಡ್‌ಲ್ಯಾಂಡ್ ರೆಸ್ಟೋರೆಂಟ್ ಶಾರ್ಜಾ.