ಕರ್ನಾಟಕ

ಚೆನ್ನೈನಲ್ಲಿ ಕನ್ನಡಿಗ ಐಪಿಎಸ್ ಅಧಿಕಾರಿ ಹರೀಶ್ ನಿಗೂಢ ಸಾವು

Pinterest LinkedIn Tumblr

harish IPS

ಚೆನ್ನೈ: ತಮಿಳುನಾಡು ಕೇಡರ್ ನ ಕರ್ನಾಟಕ ಮೂಲದ ಐಪಿಎಸ್ ಅಧಿಕಾರಿ ಎನ್.ಹರೀಶ್ ಅವರು ಗುರುವಾರ ಚೆನ್ನೈನ ಎಗ್ಮೋರೆಯಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

ಎಗ್ಮೋರ್ ನಲ್ಲಿರುವ ಐಪಿಎಸ್ ಐಧಿಕಾರಿಗಳ ಮೆಸ್ ರೂಂ 104ರಲ್ಲಿ ಹರೀಶ್ ಅವರ ಮೃತದೇಹ ಪತ್ತೆಯಾಗಿದ್ದು, 32 ವರ್ಷದ ಯುವ ಪೊಲೀಸ್ ಅಧಿಕಾರಿಯ ನಿಗೂಢ ಸಾವಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಹರೀಶ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

2009ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದ ಹರೀಶ್ ಅವರು ಚೆನ್ನೈನಲ್ಲಿ ಜಾಗೃತ ಮತ್ತು ಭ್ರಷ್ಟಾಚಾರ ನಿಗ್ರಹ ವಿಭಾಗದ ಎಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರನ್ನು ಇತ್ತೀಚಿಗೆ ಮಧುರೈನಿಂದ ಚೆನ್ನೈಗೆ ವರ್ಗಾವಣೆ ಮಾಡಲಾಗಿತ್ತು. ಈ ವರ್ಗಾವಣೆಯಿಂದ ಹರೀಶ್ ಅವರು ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ.
ಎಗ್ಮೋರೆ ಪೊಲೀಸರು ಪ್ರಕರಣ ತನಿಖೆ ನಡೆಸುತ್ತಿದ್ದಾರೆ.

Write A Comment