ಬೆಂಗಳೂರು: ‘ಬಹದ್ದೂರ್’ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶನದ, ಧ್ರುವ್ ಸರ್ಜಾ ನಟಿಸುತ್ತಿರುವ ‘ಭರ್ಜರಿ’ ಸಿನೆಮಾದಲ್ಲಿ ನಟಿ ಹರಿಪ್ರಿಯಾ ಅವರಿಗೆ ಭರ್ಜರಿ ಪಾತ್ರವೊಂದು ಸಿಕ್ಕಿದೆ ಎನ್ನುತ್ತವೆ ಮೂಲಗಳು. ಇದಕ್ಕೆ ಹರಿಪ್ರಿಯಾ ಕೆನ್ನೆಯಲ್ಲಿ ಮೂಡುವ ಡಿಂಪಲ್ ಕಾರಣವಂತೆ. “ಸಿನೆಮಾದಲ್ಲಿ ಡಿಂಪಲ್ ಗಳು ಪ್ರಮುಖ ಪಾತ್ರ ವಹಿಸಿವೆ.
ಇದಕ್ಕಾಗಿ ಚಿತ್ರತಂಡ ಡಿಂಪಲ್ ನಟಿಗಾಗಿ ಹುಡುಕಾಟ ನಡೆಸಿದ್ದಾಗ ಹರಿಪ್ರಿಯ ಸೂಕ್ತ ಆಯ್ಕೆ ಎಂದೆನಿಸಿತು. ಹೈದರಾಬಾದ್ ರಾಮೋಜಿರಾವ್ ಸಿಟಿಯಲ್ಲಿ ಫೆಬ್ರವರಿ ೨೨ ರಿಂದ ಹರಿಪ್ರಿಯ ಭಾಗದ ಚಿತ್ರೀಕರಣ ನಡೆಯಲಿದೆ” ಎನ್ನುತ್ತವೆ ಮೂಲಗಳು.
ಡಿಂಪಲ್ ಕೆನ್ನೆಯುಳ್ಳ ಮತ್ತೊಬ್ಬ ನಟಿಗೆ ಶೋಧನೆ ನಡೆದಿದೆಯಂತೆ. “ಸಿನೆಮಾ ನಿರ್ಮಾಪಕರು ಡಿಂಪಲ್ ಇರುವ ಮತ್ತೊಬ್ಬ ನಟಿಯ ಶೋಧನೆಗೆ ತೊಡಗಿದೆ. ಅವರು ಸಿನೆಮಾದಲ್ಲಿ ಅತಿಥಿ ಪಾತ್ರ ವಹಿಸಲಿದ್ದಾರೆ” ಎನ್ನುತ್ತವೆ ಮೂಲಗಳು.
ಈ ಹಿಂದೆ ತೆಲುಗು ಚಿತ್ರದ ರಿಮೇಕ್ ‘ರನ್ನ’ದಲ್ಲಿ ರಚಿತಾ ರಾಮ್ ಮತ್ತು ಹರಿಪ್ರಿಯ ಒಟ್ಟಿಗೆ ನಟಿಸಿದ್ದರು. ಸದ್ಯಕ್ಕೆ ಹರಿಪ್ರಿಯ ‘ನೀರ್ ದೋಸೆ ಸಿನೆಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.