ಕರ್ನಾಟಕ

ಶಿವರಾತ್ರಿಗೆ ಜಾಗರಣೆಗೆ ‘ದನ ಕಾಯೋನು’ ಸಿನೆಮಾದ ಆಡಿಯೋ ಹಾಡುಗಳ ಬಿಡುಗಡೆ

Pinterest LinkedIn Tumblr

dana kaayonu

ಬೆಂಗಳೂರು: ಮಾರ್ಚ್ ನ ಶಿವರಾತ್ರಿ ಹಬ್ಬಕ್ಕೆ ‘ದನ ಕಾಯೋನು’ ಸಿನೆಮಾದ ಆಡಿಯೋ ಬಿಡುಗಡೆಗೆ ನಿರ್ಮಾಪಕರು ಸಜ್ಜಾಗುತ್ತಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಈ ಸಿನೆಮಾದಲ್ಲಿ ದುನಿಯಾ ವಿಜಯ್ ಮತ್ತು ಪ್ರಿಯಾಮಣಿ ಮುಖ್ಯಭೂಮಿಕೆಯಲ್ಲಿದ್ದು ಚಿತ್ರದ ಘೋಷಣೆಯಾದಾಗಲಿಂದಲೂ ಸುದ್ದಿಯಲ್ಲಿದೆ.

ಯೋಗರಾಜ್ ಮತ್ತು ವಿಜಯ್ ಮೊದಲ ಬಾರಿಗೆ ಒಟ್ಟಾಗಿರುವುದು ಕೂಡ ವಿಶೇಷ ಮತ್ತು ಕುತೂಹಲ ಹೆಚ್ಚಿಸಿದೆ. ಈ ಸಿನೆಮಾದ ಆಡಿಯೋವನ್ನು ಚಿತ್ರದುರ್ಗದಲ್ಲಿ ವೈಭವಯುತವಾಗಿ ಬಿಡುಗಡೆ ಮಾಡಲು ನಿರ್ಮಾಪಕ ಕನಕಪುರ ಶ್ರೀನಿವಾಸ್ ಮುಂದಾಗಿದ್ದಾರೆ.

“‘ದನ ಕಾಯೋನು’ ಸಿನೆಮಾಗೆ ಸಂಗೀತ ನೀಡಿರುವ ವಿ ಹರಿಕೃಷ್ಣ ಕೂಡ ಶಿವರಾತ್ರಿಯ ಜಾಗರಣೆಗೆ ಪ್ರದರ್ಶನ ನೀಡಲಿದ್ದಾರಂತೆ. ನಂತರ ಆಡಿಯೋ ಬಿಡುಗಡೆ ನಡೆಯಲಿದೆ” ಎಂದು ವಿವರಿಸುತ್ತಾರೆ ಶ್ರೀನಿವಾಸ್.

Write A Comment