ರಾಯಚೂರು: ದಿರಾಯಚೂರಿನ ಯರಮರಸ್‌ನಲ್ಲಿ ಬುಧವಾರ ಬೆಳಿಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ಯಾದಗಿರಿಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಕಚೇರಿಯಲ್ಲಿ ಆಹಾರ ನಿರೀಕ್ಷಕರಾಗಿರುವ ವೆಂಕಣ್ಣ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆದಾಯಕ್ಕಿಂತಲೂ ಅಧಿಕ ಆಸ್ತಿ ಗಳಿಕೆ ಆರೋಪದಡಿ ದಾಖಲಾಗಿದ್ದ ಖಾಸಗಿ ದೂರಿನ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾಯಚೂರು ಲೋಕಾಯುಕ್ತ ಎಸ್ಪಿ ವಿವಿ ಕುಂಬಾರ್ ನೇತೃತ್ದಲ್ಲಿ ವೆಂಕಣ್ಣ ಮನೆ ಮೇಲೆ ದಾಳಿ ನಡೆದಿದ್ದು ದಾಖಲೆ ಪರಿಶೀಲನೆ ಮುಂದುವರೆದಿದೆ.
ಇದೇ ವೇಳೆ, ವೆಂಕಣ್ಣ ಅವರ ಯಾದಗಿರಿಯ ಕಚೇರಿಯ ಮೇಲೂ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆದಿದೆ.
ಮಧ್ಯಾಹ್ನದ ವೇಳೆಗೆ ದಾಳಿಯಲ್ಲಿ ಜಪ್ತಿಯಾದ ವಸ್ತು ಹಾಗೂ ಅಧಿಕ ಗಳಿಕೆಯ ವಿವರಗಳ ಲೆಕ್ಕ ಸಿಗಲಿದೆ ಎಂದು ಲೋಕಾಯುಕ್ತ ಎಸ್ಪಿ ವಿವಿ ಕುಂಬಾರ್ ಅವರು ತಿಳಿಸಿದ್ದಾರೆ.