ಹುಬ್ಬಳ್ಳಿ: ತಾನು ಪ್ರೀತಿಸಿದ ಹುಡುಗಿ ಸಿಗಲಿಲ್ಲ ಎಂಬ ಕಾರಣಕ್ಕೆ ಪ್ರೇಮಿಗಳ ದಿನಾಚರಣೆಯ ಮುನ್ನಾ ದಿನವೇ ಪ್ರೇಮಿಯೊಬ್ಬ ಚಲಿಸುವ ರೈಲಿನಿಂದ ಹಾರಿ ಪ್ರಾಣ ಬಿಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಇಲ್ಲಿನ ಕಸಾಬಾಪೇಟೆ ನಿವಾಸಿ ಚೇತನ ಗುಳ್ಳಾರಿ (18) ಎಂಬ ಯುವಕ ಪ್ರೀತಿ ಫಲಿಸದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗದಗ ಮೂಲದ ಚೇತನ್ ಇಲ್ಲಿನ ಖಾಸಗಿ ಕಾಲೇಜ್ ವೊಂದರಲ್ಲಿ ದ್ವಿತೀಯ ವರ್ಷದ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ.
ಚೇತನ್ ಕಳೆದೆರಡು ವರ್ಷದಿಂದ ತನ್ನ ಕಾಲೇಜಿನ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಆದರೆ ಆ ಹುಡುಗಿ ಪ್ರೀತಿಯನ್ನು ನಿರಾಕರಿಸಿದ್ದಳು ಎನ್ನಲಾಗಿದೆ. ಇದರಿಂದ ಮನನೊಂದ ಚೇತನ್ ಇದೇ ತಿಂಗಳ 11 ರಂದು ಮನೆಯಿಂದ ಯಾರಿಗೂ ಹೇಳದೆ ನಾಪತ್ತೆಯಾಗಿದ್ದ. ಆದರೆ ಈತನ ಮೃತ ದೇಹ ಪುಣೆಯ ಪಿಂಪರಿ ಬಳಿಯ ರೈಲ್ವೆ ಹಳಿ ಬಳಿ ಪತ್ತೆಯಾಗಿದೆ.
ಈ ಕುರಿತಂತೆ ಪುಣೆ ಬಳಿಯ ಭಾವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.