ಗುಬ್ಬಿ: ತುಮಕೂರಿನ ಗುಬ್ಬಿ ತಾಲೂಕಿನ ಸಿ ಎಸ್ ಪುರ ಗ್ರಾಮದ ಬಳಿ ಹುರುಳಗೆರೆ ಕೆರೆಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. 7ನೇ ತರಗತಿ ವೇಣು, ಶಶಿ ಮತ್ತು ಚೇತನ್ ಕುಮಾರ್ ಮೃತದುರ್ದೈವ ವಿದ್ಯಾರ್ಥಿಗಳು.
ಚುನಾವಣೆಗೆ ಶಿಕ್ಷಕರನ್ನು ನಿಯೋಜಿಸಿದ್ದ ಪರಿಣಾಮ ಶಾಲೆಯಲ್ಲಿ ತರಗತಿಗಳು ನಡೆದಿರಲಿಲ್ಲ. ಇದರಿಂದ ವಿದ್ಯಾರ್ಥಿಗಳು ಕೆರೆಯ ಬಳಿ ತೆರಳಿದ್ದರಿಂದ ದುರ್ಘಟನೆ ಸಂಭವಿಸಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಈ ಪ್ರಕರಣವನ್ನು ಸಿ. ಎಸ್ ಪುರಾ ಪೊಲೀಸರು ದಾಖಲಿಸಿಕೊಂಡಿದ್ದಾರೆ.