ಕರ್ನಾಟಕ

10 ಕೋಟಿಯ ಸೀಕ್ರೆಟ್ ಅಕೌಂಟ್ ಪತ್ತೆ!

Pinterest LinkedIn Tumblr

rajiv-kjTxuಬೆಂಗಳೂರು(ಫೆ.10): ರಾಜೀವ್​’ಗಾಂಧಿ ಆರೋಗ್ಯ ವಿವಿಯ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಇದು ನಿಜಕ್ಕೂ ಅವ್ಯವಹಾರವೋ, ಹಗರಣವೋ, ಹಣ ಹೊಡೆಯುವ ಹುನ್ನಾರವೋ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.

ಈ ಬಾರಿ ವಿವಿಯವರೇ ಡೆಪಾಸಿಟ್ ಮಾಡಿದ್ದ 10 ಕೋಟಿಯ ಅಕೌಂಟ್ ಪತ್ತೆಯಾಗಿದೆ. ಇದರಲ್ಲಿ ವಿಶೇಷವೆಂದರೆ, 10 ಕೋಟಿ ಡೆಪಾಸಿಟ್ ಇಟ್ಟಿದ್ದ ವಿಚಾರ ವಿವಿಯವರಿಗೇ ಗೊತ್ತಿರಲಿಲ್ಲ ಎನ್ನುವುದು ಅಚ್ಚರಿ ತರಿಸಿದೆ.

ವಿವಿಗೆ ಸೇರಿದ 10 ಕೋಟಿ ಮೈಸೂರು ಜಿಲ್ಲೆಯ ಬೇಗೂರು ವಿಜಯಾ ಬ್ಯಾಂಕ್ ಖಾತೆಯಲ್ಲಿ ಪತ್ತೆಯಾಗಿದೆ. ಇದರಲ್ಲಿ ಬ್ಯಾಂಕ್ ಮ್ಯಾನೇಜರ್ ಪಾತ್ರವಿದೆ ಎಂದು ಹೇಳಲಾಗುತ್ತಿದೆ. ವಿವಿಯ ಎಲ್ಲ ಖಾತೆಗಳನ್ನೂ ಬೆಂಗಳೂರಿಗೆ ವರ್ಗಾಯಿಸಬೇಕು ಹಾಗೂ ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಸರ್ಕಾರದ ಆದೇಶವಿದ್ದರೂ, ಈ 10 ಕೋಟಿ ಗುಪ್ತವಾಗಿಯೇ ಉಳಿದದ್ದು ಏಕೆ ಎನ್ನುವ ಪ್ರಶ್ನೆಗೆ ತನಿಖೆಯಲ್ಲಿ ಉತ್ತರ ಸಿಗಬೇಕಿದೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್​ ಪಾಟೀಲ್ ಅವರು ಸಂಬಂಧಿಸಿದ ಅಧಿಕಾರಿಗಳನ್ನ ಕರೆಸಿ ಚರ್ಚೆಯನ್ನೂ ನಡೆಸಿದ್ದಾರೆ.

Write A Comment