ಬೆಂಗಳೂರು,ಫೆ.೧೦-ಕಂಡಕ್ಟರ್ ಜೊತೆ ಜಗಳ ಮಾಡಿಕೊಂಡು ಖಾಸಗಿ ಬಸ್‌ನಿಂದ ಮಾರ್ಗ ಮಧ್ಯೆ ಇಳಿದ ಯುವಕನೊಬ್ಬನ ಮೇಲೆ ಹಿಂದಿನಿಂದ ವೇಗವಾಗಿ ಬಂದ ಬಿಎಂಟಿಸಿ ಬಸ್ ಹರಿದು ಮೃತಪಟ್ಟಿರುವ ದುರ್ಘಟನೆ ಬನ್ನೇರುಘಟ್ಟ ರಸ್ತೆಯ ಗೋಪಾಲನ್ ಮಾಲ್ ಬಳಿ ನಡೆದಿದೆ.
ತಿಲಕ್‌ನಗರದ ರಿಯಾಜ್ ಖಾನ್(೨೩)ಮೃತ ಯುವಕನಾಗಿದ್ದಾನೆ,ನಗರದ ಕಡೆಯಿಂದ ಬನ್ನೇರುಘಟ್ಟ ಕಡೆಗೆ ಹೋಗುತ್ತಿದ್ದ ವೆಂಕಟೇಶ್ವರ ಬಸ್‌ನಲ್ಲಿ ನಿನ್ನೆ ಮಧ್ಯಾಹ್ನ ೩ರ ವೇಳೆ ಪ್ರಯಾಣಿಸುತ್ತಿದ್ದ ರಿಯಾಜ್‌ಖಾನ್ ಬಸ್ ಚಾರ್ಜ್ ಕೂಡುವ ವಿಚಾರದಲ್ಲಿ ಕಂಡಕ್ಟರ್ ಜೊತೆ ಜಗಳ ಮಾಡಿಕೊಂಡಿದ್ದಾನೆ.
ಜಗಳ ವಿಕೋಪಕ್ಕೆ ತಿರುಗಿದಾಗ ಕಂಡಕ್ಟರ್ ಮಾರ್ಗ ಮಧ್ಯೆ ಬಸ್ ನಿಲ್ಲಿಸಿದ್ದ ರಿಯಾಜ್ ಖಾನ್ ಬಸ್ ಇಳಿದ ಕೂಡಲೇ ಹಿಂದಿನಿಂದ ಬನ್ನೇರುಘಟ್ಟ ಕಡೆಗೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಹರಿದು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಸಾಯಿರಾಮ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮೈಕೋಲೇಔಟ್ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.