ಲಕ್ನೌ,ಫೆ.10-ಸ್ಥಳಿಯ ಸಂಸ್ಥೆಗಳ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.50ರ ಮೀಸಲಾತಿ ನೀಡಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವಾಗಲೇ ಒಂದು ಹೆಜ್ಜೆ ಮುಂದೆ ಹೋಗಿರುವ ಉತ್ತರ ಪ್ರದೇಶ ಸರ್ಕಾರ, ಬ್ಲಾಕ್ ಪ್ರಮುಖರ ಚುನಾವಣೆಯಲ್ಲಿ ಶೇ.50ಕ್ಕೂ ಹೆಚ್ಚು ಸ್ಥಾನಗಳನ್ನು ಮಹಿಳೆಯರಿಗಾಗಿ ಕಾಯ್ದಿರಿಸಿದೆ.
ಕಳೆದ ವಾರ ನಡೆದ ಗ್ರಾಮ ಪ್ರಧಾನ ಚುನಾವಣೆಯಲ್ಲಿ ಶೇ.44ರಷ್ಟು ಮಹಿಳೆಯರು ಆಯ್ಕೆಯಾಗಿದ್ದು, ಅದರಲ್ಲಿ ನಾಲ್ವರು ಪಿಹೆಚ್‌ಡಿ ಪದವೀಧರರಿದ್ದರು. ಭಾನುವಾರ ನಡೆದ 793 ಬ್ಲಾಕ್ ಪ್ರಮುಖರ ಚುನಾವಣೆಯಲ್ಲಿ ಶೇ.50ಕ್ಕೂ ಹೆಚ್ಚು ಮಹಿಳೆಯರು ಕಣಕ್ಕಿಳಿದಿದ್ದರು.
ಅವರಲ್ಲಿ 385ಜನ ಅವಿರೋಧ ಆಯ್ಕೆಯಾಗಿದ್ದು, ಮಹಿಳೆಯರ ಸಂಖ್ಯೆ 200, ಉಳಿದ ಕ್ಷೇತ್ರಗಳ ಪೈಕಿ 199ಮಹಿಳೆಯರು ಆಯ್ಕೆಯಾಗಿದ್ದಾರೆ. ಒಟ್ಟು 193ಸ್ಥಾನಗಳ ಪೈಕಿ ಮಹಿಳೆಯರು 399ಮಂದಿ ಜಯಗಳಿಸಿದ್ದಾರೆ.