ಕರ್ನಾಟಕ

ಇದು ಕಲಬುರಗಿ ಭಕ್ತರೊಬ್ಬರ ಹೈಟೆಕ್ ಹರಕೆ

Pinterest LinkedIn Tumblr

helicopter-harake

ಕಲಬುರಗಿ: ಸಾಮಾನ್ಯವಾಗಿ ಹರಕೆಗಳನ್ನು ತೀರಿಸಲು ಭಕ್ತರು ವಿಭಿನ್ನವಾಗಿ ಎಡೆ ಹರಕೆ ಮುಡಿ ಹರಕೆ ಮಾಡುವದು ಸಹಜ. ಆದರೆ ಕಲಬುರಗಿಯ ಭಕ್ತನೋರ್ವ ಭಕ್ತ ತಾನು ನಂಬಿದ ಮಠಕ್ಕೆ ತನ್ನ ಇಷ್ಟದ ಗುರುವಿಗೆ, ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಿಸಿ ಹೈಟೆಕ್ ಹರಕೆಯನ್ನ ತೀರಿಸಿದ್ದಾನೆ.

ಆಕಾಶದಿಂದ ಹೆಲಿಕಾಪ್ಟರ್‍ನಿಲ್ಲಿ ಸುರಿದ ಹೂ ಮಳೆ. ಮುಗಿಲೆತ್ತರದಲ್ಲಿ ನಿಂತು ಭಕ್ತರಿಗೆ ಆಶೀರ್ವಾದ ಮಾಡಿದ ಶ್ರೀಗಳು. ತಮ್ಮ ಇಷ್ಟದ ಗುರುಗಳನ್ನ ಕಣ್‍ತುಂಬಾ ನೋಡಿ ಆನಂದಿಸ್ತಾ ಇರೋ ಭಕ್ತರು. ಇಂತಹದ್ದೊಂದು ಮನಮೋಹಕ ದೃಶ್ಯ ಕಂಡು ಬಂದದ್ದು ಕಲಬುರಗಿ ಜಿಲ್ಲೆಯ ನಾಲವಾರದ ಶ್ರೀ ಕೋರಿ ಸಿದ್ದೇಶ್ವರ ಮಠದಲ್ಲಿ. ಮಠದ ಶ್ರೀಗಳಾದ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಇಂಥದ್ದೊಂದು ಅಪರೂಪದ ಸೇವೆ ಸಲ್ಲಿಸಿದ್ದು ಭಕ್ತ ಶಾಂತಗೌಡ.

ಈ ಹರಕೆಗೆ ಕಾರಣ ಅಂದ್ರೆ ಅವರಿಗೆ ಮಠದ ಗುರುಗಳಿಂದ ತಮ್ಮ ಬಾಳಲ್ಲಿ ಸಾಕಷ್ಟು ಬದಲಾವಣೆಗಳಾಗಿ, ಕಷ್ಟ ಕಾರ್ಪಣ್ಯಗಳನ್ನ ಕಳೆದುಕೊಂಡಿದ್ದಾರೆ. ಈ ಶ್ರೀ ಮಠದಿಂದ ಬಾಳು ಬೆಳಗುತ್ತೆ ಅನ್ನೋ ಬಲವಾದ ನಂಬಿಕೆ ಕೂಡಾ ಇಲ್ಲಿ ಸಾಕಷ್ಟು ಭಕ್ತರಲ್ಲಿದೆ.

ಇನ್ನು ಈ ಮಠದ ಜಾತ್ರೆ ಬರೋದು ಪ್ರತಿವರ್ಷದ ಫೆಬ್ರವರಿ ತಿಂಗಳಲ್ಲಿ. ಅವತ್ರಾಮವಾಸೆ ದಿನದಂದು ಭಕ್ತರು ತಮ್ಮ ತನಾರತಿ ಸೇವೆಯ ಹರಕೆಯನ್ನ ತೀರಿಸ್ತಾರೆ. ಮರುದಿನ ತೇರನ್ನ ಎಳೆಯುವದು. ಈ ತೇರನ್ನ ನಿಲ್ಲಿಸಲು ಭಕ್ತ ಶಾಂತಗೌಡ ರಥದ ಮನೆಯನ್ನ ನಿರ್ಮಿಸಿಕೊಟ್ಟಿದ್ದಾನೆ. ಹೀಗಾಗಿ ರಥದ ಮನೆಯ ಲೋಕಾರ್ಪಣೆಗೆ ತನ್ನ ಇಷ್ಟದ ಗುರುವನ್ನ ರಥದ ಮನೆ ಮೇಲೆ ರಥದೆತ್ತರಕ್ಕೆ ಕುಳ್ಳಿರಿಸಿ, ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಿ ತನ್ನ ಹರಕೆಯನ್ನ ತೀರಿಸಿದ್ದಾನೆ. ಇದೇ ಸಂಧರ್ಭದಲ್ಲಿ ಮಾತನಾಡಿದ ಶ್ರೀಗಳು, ಮೊದಲ ಬಾರಿಗೆ ಶ್ರೀಮಠಕ್ಕೆ ಇಂಥಹ ಸೇವೆ ಸಂದಿದ್ದು ನಿಜಕ್ಕೂ ಶ್ಲಾಘನೀಯ ಅಂದ್ರು.

ಜಾತ್ರೆ ನೋಡಲು ಸಾವಿರಾರು ಭಕ್ತರು ಶ್ರೀ ಮಠದಲ್ಲಿ ಸೇರಿದ್ರು, ಆದ್ರೆ ತುಂಬಾ ಹತ್ತಿರದಿಂದ ಹೆಲಿಕಾಪ್ಟರ್ ನೋಡಿ ಖುಷಿ ಪಡೋಣ ಅಂತಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರಿಂದ ಈ ಹೆಲಿಕಾಪ್ಟರ್ ಹೈಟೆಕ್ ಹರಕೆಗೆ ಮತ್ತಷ್ಟು ಮೆರಗನ್ನ ಕೊಟ್ಟಿತ್ತು.

Write A Comment