ಕನ್ನಡ ವಾರ್ತೆಗಳು

ಮಣ್ಣಗುಡ್ಡೆ: ನೇತ್ರ, ಹೃದಯ‌ ಉಚಿತ ತಪಾಸಣಾ ಶಿಬಿರ.

Pinterest LinkedIn Tumblr

mannaguda_eye_camp

ಮಂಗಳೂರು,ಫೆ.10: ಎಂಸಿ‌ಎಫ್ ಸಂಸ್ಥೆಯು ಸ್ಥಳೀಯ ಯುವ ಸಂಘಟನೆಗಳ ಸಹಕಾರದಿಂದ‌ ಆರೋಗ್ಯ ಶಿಬಿರ ಆಯೋಜಿಸುವುದರ ಮೂಲಕ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಪ್ರಶಂಸನೀಯವಾಗಿದೆ ‌ಎಂದು ಮಂಗಳೂರಿನ ಮೇಯರ್ ಜೆಸಿಂತಾ ವಿಜಯ‌ ಆಲ್ಫ್ರೆಡ್‌ ಅವರು ಹೇಳಿದರು.

ಮಂಗಳೂರಿನ ಎಂ.ಸಿ.ಎಫ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಮಂಗಳೂರಿನ ಮಣ್ಣಗುಡ್ಡೆಯ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾಥಿ೯ ಸಂಘ, ಉತ್ಸಾಹಿ ತರುಣ ವೃಂದ ಹಾಗೂ ಬರ್ಕೆ ಫ್ರೆಂಡ್ಸ್‌ನ ಸಂಯುಕ್ತ‌ ಆಶ್ರಯದಲ್ಲಿ ಹಾಗೂ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಸಹಯೋಗದಲ್ಲಿ ಫೆ.೭ರಂದು ಮಣ್ಣಗುಡ್ಡೆ ಶಾಲೆಯಲ್ಲಿ‌ ಆಯೋಜಿಸಲಾದ‌ ಉಚಿತ ನೇತ್ರತಪಾಸಣೆ, ಚಿಕಿತ್ಸೆ ಹಾಗೂ ಉಚಿತ ಹೃದಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ‌ಅತಿಥಿಯಾಗಿ ಪಾಲ್ಗೊಂಡ ಮಾಜಿ ಮೇಯರ್ ಎಂ.ಶಶಿಧರ ಹೆಗ್ಡೆ ಅವರು ಮಾತನಾಡಿ, ದ.ಭಾರತದ ಪ್ರತಿಷ್ಠಿತ ಉದ್ಯಮವೆನಿಸಿರುವ ಎಂಸಿ‌ಎಫ್ ಸಂಸ್ಥೆಯುದ.ಕ.ಜಿಲ್ಲೆಯ ಆರ್ಥಿಕ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದೆ‌ ಎಂದು ಅಭಿನಂದಿಸಿದರು.

ಎಂಸಿ‌ಎಫ್‌ನ ಎಚ್‌ಆರ್ ವಿಭಾಗದ ಪಿ.ಜಿ.ರೈ, ಹಳೆ ವಿದ್ಯಾರ್ಥಿ ಸಂಘದ‌ ಅಧ್ಯಕ್ಷ ಸುರೇಶ್‌ ಚಂದ್ರ ಶೆಟ್ಟಿ, ಮಣ್ಣಗುಡ್ಡೆ ಶಾಲೆಯ ಮುಖ್ಯ ಶಿಕ್ಷಕಿ ಜಾಯ್ಸ್ ಹೆನ್ರಿಟಾ, ಕಾರ್ಪೋರೇಟರ್ ಜಯಂತಿ ‌ಆಚಾರ್, ಹಳೆ ವಿದ್ಯಾರ್ಥಿ ಸಂಘದ ಸಂಘಟನಾ ಕಾರ್ಯದರ್ಶಿ ರಾಜೇಶ್ ಶೆಟ್ಟಿ, ಉಪಾಧ್ಯಕ್ಷ ಸೀತಾರಾಮ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಡಾ.ಕಿಶೋರ್‌ ಕುಮಾರ್, ಉತ್ಸಾಹಿ ತರುಣ ವೃಂದದ ಕಾರ್ಯದರ್ಶಿ ನಿರಂಜನ್‌ಗಟ್ಟಿ, ಬರ್ಕೆ ಫ್ರೆಂಡ್ಸ್‌ನ ಭವಾನಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.

ಎಂಸಿ‌ಎಫ್‌ನ ನಿರ್ದೆಶಕ ಪ್ರಭಾಕರ ರಾವ್‌ ಅವರು ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ಪ್ರಸ್ತಾವನೆಗೈದರು. ಎಂಸಿ‌ಎಫ್‌ನ ಅಧಿಕಾರಿ ನಾಗೇಶ್ ಎಂ. ವಂದಿಸಿದರು. ಡಾ|ಯೋಗೀಶ್ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಒಟ್ಟು೩೧೭ ಮಂದಿ ಶಿಬಿರದ ಪ್ರಯೋಜನ ಪಡೆದರು. ಶಿಬಿರದಲ್ಲಿ ಮಧುಮೇಹ, ರಕ್ತ ದೊತ್ತಡ ಹಾಗೂ ಹೃದಯ ತಪಾಸಣೆಯನ್ನೂ ನಡೆಸಲಾಯಿತು.

Write A Comment