ಅಂತರಾಷ್ಟ್ರೀಯ

ಹಿಂದೂ ವಿವಾಹ ಕಾಯ್ದೆಗೆ ಪಾಕ್ ಸಂಸತ್ತಿನಿಂದ ಗ್ರೀನ್ ಸಿಗ್ನಲ್

Pinterest LinkedIn Tumblr

Hindu-Marriage-Act

ಲಾಹೋರ್: ಮಹ್ವತದ ಬೆಳವಣಿಗೆಯೊಂದರಲ್ಲಿ ಹಿಂದೂ ವಿವಾಹ ಕಾಯ್ದೆಗೆ ಪಾಕಿಸ್ತಾನ ಸಂಸತ್ತು ಅನುಮೋದನೆ ನೀಡಿದೆ. ಇದರಿಂದಾಗಿ ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತ ಸಮುದಾಯವಾಗಿರುವ ಹಿಂದೂಗಳಿಗೆ ವಿವಾಹಕ್ಕೆ ಸಂಬಂಧಿಸಿದಂತೆ ಇದ್ದ ಕಾನೂನಿನ ಅಡೆಡತಡೆಗಳು ನಿವಾರಣೆಯಾಗಲಿದೆ.

ಹಿಂದೂ ವಿವಾಹ ಕಾಯ್ದೆ-2015 ಕಾಯ್ದೆಯ ಅಂತಿಮ ಕರಡಿಗೆ ರಾಷ್ಟ್ರೀಯ ಕಾನೂನು ಸ್ಥಾಯಿ ಸಮಿತಿ ಗ್ರೀನ್ ಸಿಗ್ನಲ್ ನೀಡಿದ್ದು, ಸಭೆಯಲ್ಲಿ 5 ಹಿಂದೂ ಶಾಸಕರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು. ದಶಕಗಳಿಂದಲೂ ಈ ಬಿಲ್ ನೆನೆಗುದಿಗೆ ಬಿದ್ದಿತ್ತು.

ಎರಡು ಪ್ರಮುಖ ತಿದ್ದುಪಡಿಗಳನ್ನು ಮಾಡಲಾದ ನಂತರ ಕರಡನ್ನು ಅವಿರೋಧವಾಗಿ ಪಾಸ್ ಮಾಡಲಾಗಿದೆ. ನೂತನ ನಿಯಮದ ಅನ್ವಯ ಪಾಕಿಸ್ತಾನದಲ್ಲಿ ಹಿಂದೂ ಪುರುಷ ಹಾಗೂ ಮಹಿಳೆಯರಿಗೆ ವಿವಾಹವಾಗಲು 18 ವರ್ಷ ವಯಸ್ಸು ನಿಗದಿಪಡಿಸಲಾಗಿದೆ.

Write A Comment