ದಾವಣಗೆರೆ : ಹರಪನಹಳ್ಳಿಯ ಸಿಂಗಾರವ್ವನ ತೋಟದ ಬಳಿ ಕಾರ್ಮಿಕ ಸಚಿವ ಪರಮೇಶ್ವರ್ ನಾಯ್ಕ್ ಅವರ ಬೆಂಗಾವಲು ಪಡೆಯ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿಯಾದ ಪರಿಣಾಮ ವಾಹನದಲ್ಲಿದ್ದ ಬೆಂಗಾವಲು ಪಡೆಉ ಇಬ್ಬರು ಪೊಲೀಸರು ಸಾವನ್ನಪ್ಪಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಉಚ್ಚಂಗಿ ದುರ್ಗಕ್ಕೆ ತೆರಳುತ್ತಿದ್ದ ಸಚಿವ ನಾಯ್ಕ್ ಅವರ ಕಾರಿನ ಹಿಂದಿದ್ದ ಬೆಂಗಾವಲು ವಾಹನಕ್ಕೆ ಬಸ್ ಢಿಕ್ಕಿಯಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಬೆಂಗಾವಲು ಪಡೆಯ ಪೊಲೀಸರನ್ನು ಇಚ್ಚಂಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರಿಬ್ಬರೂ ಮೃತಪಟ್ಟಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಸ್ಥಳಕ್ಕೆ ಎಸ್ಪಿ ಭೀಮಾಶಂಕರ್ ನಾಯ್ಕ ಅವರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
-ಉದಯವಾಣಿ