ಕರ್ನಾಟಕ

ಗುಜರಿ ಸೇರಲಿವೆ ಬಿಎಂಟಿಸಿಯ ಹಳೆ ಬಸ್ಸುಗಳು

Pinterest LinkedIn Tumblr

bmtcಬೆಂಗಳೂರು, ಫೆ.3: 10 ವರ್ಷಕ್ಕಿಂತ ಹಳೆಯ ಮತ್ತು 8.5 ಲಕ್ಷ ಕಿಮೀಗೂ ಹೆಚ್ಚು ಸಂಚರಿಸಿರುವ 1000 ಬಸ್ ಗಳನ್ನೂ ಸ್ಕ್ರಾಪ್ ಮಾಡಲು ಅನುಮತಿ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮನವಿ ಮಾಡಿದೆ. ಈ ಬಗ್ಗೆ ನೀಡಿರುವ ಮನವಿ ಪತ್ರದಲ್ಲಿ ಮುಂದಿನ ಹಣಕಾಸು ವರ್ಷದಲ್ಲಿ 2,000 ಬಸ್ ಖರೀದಿಸಲು 750 ಕೋಟಿ ರೂಗಳನ್ನೂ ಮಂಜೂರು ಮಾಡಬೇಕೆಂದು ಸರ್ಕಾರಕ್ಕೆ ಕೋರಿದೆ. ಎರಡನೇ ಹಂತದ ಮೆಟ್ರೋ ಕಾಮಗಾರಿಗೆ ಸರ್ಕಾರ 30,000 ಕೋಟಿ ರೂ ಹಣವನ್ನು ಮಂಜೂರು ಮಾಡಿತ್ತು. ಆದರೆ ನಾವು ಅಷ್ಟು ದೊಡ್ಡ ಮೊತ್ತದ ಹಣವನ್ನು ಕೇಳುತ್ತಿಲ್ಲ. ಹೊಸ ಬಸ್ ಗಳ ಅಗತ್ಯ ತುಂಬಾ ಇದೆ. ಅದನ್ನು ಪೂರೈಸದಿದ್ದರೆ ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈಗ ಮನವಿ ಮಾಡಿರುವ 2,000 ಬಸ್ ಗಳಲ್ಲಿ 1,500 ಸಾಮಾನ್ಯ ಬಸ್ ಗಳು ಮತ್ತು ಉಳಿದ 500 ರನ್ನು 32 ಸೀಟ್ ಗಳ ಮಿಡಿ ಬಸ್ ಅಥವಾ ಎಸಿ ಬಸ್ ಗಳನ್ನೂ ಪಡೆಯಲು ಯೋಚಿಸಲಾಗಿದೆ. ಸದ್ಯ ನಗರದಲ್ಲಿ ಸಂಚರಿಸುತ್ತಿರುವ ಎಸಿ ಬಸ್ ಗಳನ್ನು ಜವಾಹರಲಾಲ್ ನೆಹರು ನಗರ ನವೀಕರಣ ಮಿಷನ್ ಯೋಜನೆಯಲ್ಲಿ ಪಡೆಯಲಾಗಿತ್ತು. ಮುಂದಿನ ಹಂತದಲ್ಲಿ 1,500 ಬಸ್ ಗಳನ್ನು ನೀಡಬೇಕೆಂದು ಮನವಿ ಮಾಡಲಾಗುವುದು ಎಂದು ಬಿಎಂಟಿಸಿ ಮ್ಯಾನೇಜಿಂಗ್ ಡೈರೆಕ್ಟರ್ ಏಕ್ರೂಪ್ ಕೌರ್ ತಿಳಿಸಿದ್ದಾರೆ.

2013-14 ರಲ್ಲಿ ನಗರದಲ್ಲಿ 6,775 ಬಿಎಂಟಿಸಿ ಬಸ್ ಗಳು ಓಡಾಡುತ್ತಿದ್ದವು. ಆದರೆ ಈಗ ಹೊಸ ಬಸ್ ಗಳನ್ನು ತೆಗೆದುಕೊಳ್ಳದ ಕಾರಣ ಅವುಗಳ ಸಂಖ್ಯೆ 6,400 ಕ್ಕೆ ಇಳಿದಿದೆ. ಖಾಸಗಿ ವಾಹನಗಳಲ್ಲಿ ಓಡಾಡುವ ಜನರನ್ನು ಸಾರ್ವಜನಿಕ ವಾಹನಗಳಲ್ಲಿ ಓಡಾಡುವಂತೆ ಮಾಡಲು ಹೊಸ ಬಸ್ ಗಳನ್ನು ಬಿಡಬೇಕಾಗಿದೆ. ನಗರದಿಂದ 25 ಕಿಮೀ ದೂರ ಇರುವ ಪ್ರದೇಶಗಳಲ್ಲಿ ಹೊಸದಾಗಿ ನಗರಗಳ ನಿರ್ಮಾಣವಾಗುತ್ತಿರುವುದರಿಂದ ಆ ಪ್ರದೇಶಗಳಿಗೂ ಬಸ್ಗಳ ಅವಶ್ಯಕತೆ ಇದೆ ಎನ್ನುತ್ತಾರೆ ಅವರು.

Write A Comment