ಬೆಂಗಳೂರು, ಫೆ.1-ಕಾರ್ಮಿಕ ಸಚಿವ ಟಿ.ಪಿ.ಪರಮೇಶ್ವರ್ ನಾಯಕ್ ಅವರು, ದುರಾಹಂಕಾರದ ವರ್ತನೆಯನ್ನು ಸರಿಪಡಿಸಿ ಕೊಳ್ಳಬೇಕು ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎಚ್.ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿ, ಮನುಷ್ಯನಿಗೆ ಅಹಂಕಾರ ವಿರಬೇಕು, ಆದರೆ ದುರಾಹಂಕಾರವಿರಬಾರದು. ಟಿ.ಪಿ.ಪರಮೇಶ್ವರ್ ನಾಯಕ್ ಅವರು ದುರಾಹಂಕಾರದ ವರ್ತನೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗುತ್ತದೆ ಎಂದು ತಿಳಿಸಿದ್ದಾರೆ. ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಸಚಿವರು ಅಹಂಕಾರದಿಂದ ಹೇಳಿಕೊಳ್ಳಬೇಕು. ಆದರೆ ಸಾರ್ವಜನಿಕವಾಗಿ ದುರಾಹಂಕಾರದಿಂದ ನಡೆದುಕೊಳ್ಳಬಾರದು.
ಟಿ.ಪಿ.ಪರಮೇಶ್ವರ್ ನಾಯಕ್ ಅವರು ತಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳಬೇಕು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ನಾಯಕ್ ಅವರಿಗೆ ಬುದ್ಧಿ ಹೇಳಬೇಕು ಎಂದು ಹೇಳಿದರು. ಪರಮೇಶ್ವರ್ ನಾಯಕ್ ಅವರು ಕೆಳಸಮುದಾಯದಿಂದ ಬಂದವರು. ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಅರಿವು ಅವರಿಗೆ ಇರುತ್ತದೆ. ಈ ರೀತಿ ಅವರು ವರ್ತಿಸಿ ತಪ್ಪೆಸಗಿದ್ದಾರೆ. ತಮ್ಮ ತಪ್ಪನ್ನು ತಿದ್ದುಕೊಳ್ಳಬೇಕು ಎಂದು ಸಲಹೆ ಮಾಡಿದರು. ಕಲವು ಸಚಿವರು ಮಾಡುವ ತಪ್ಪುಗಳಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಈ ತಪ್ಪನ್ನು ಸರಿಪಡಿಸಿಕೊಂಡು ಎಚ್ಚರಿಕೆಯಿಂದ ವರ್ತಿಸಬೇಕು ಎಂದು ವಿಶ್ವನಾಥ್ ಸಲಹೆ ಮಾಡಿದರು.