ದುಬೈ : ಕರ್ನಾಟಕ ಇಸ್ಲಾಮಿಕ್ ಸೆಂಟರ್ ಇದರ ಅಧೀನದಲ್ಲಿ ಜೀಲಾನಿ (ಖ ಸಿ) ರ ಅನುಸ್ಮರಣೆ , ಅಗಲಿದ ಸಮಸ್ತ ನೇತಾರರಾದ ಶಂಸುಲ್ ಉಲಮಾ (ಖ ಸಿ ) ಕಣ್ಣೀಯತ್ ಉಸ್ತಾದ್ (ಖ ಸಿ) ಮತ್ತು ಇತರ ಸಮಸ್ತ ನೇತಾರರ ಅನುಸ್ಮರಣಾ ಸಂಗಮ , ಹಾಗೂ ಆದರ್ಶ ಪರಿಶುದ್ದತೆಯ 90 ವರ್ಷ ಎಂಬ ಘೋಷವಾಖ್ಯದೊಂದಿಗೆ ಸಮಸ್ತ 90ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಾಚಾರ ಕಾರ್ಯಕ್ರಮವು ಜನವರಿ 29 ರಂದು ಜುಮಾ ನಮಾಝಿನ ಬಳಿಕ ರಫೀ ಹೋಟೆಲ್ ಸಭಾಂಗಣದಲ್ಲಿ ನಡೆಯಲಿರುವುದು.
ಇತ್ತೀಚೆಗೆ ನಡೆದ ಕೆ ಐ ಸಿ ದುಬೈ ಸಮಿತಿ ಮಾಸಿಕ ಸಭಾ ಕಾರ್ಯಕ್ರಮದಲ್ಲಿ ಈ ಬಗ್ಗೆ ವಿವರಣೆಯನ್ನು ನೀಡಿದ ಕೆ ಐ ಸಿ ಕೇಂದ್ರ ಸಮಿತಿ ಪಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆಯವರು ಈ ಕಾರ್ಯಕ್ರಮದಲ್ಲಿ ಹಲವಾರು ಉಲಮಾ ಉಮರಾ ಪಂಡಿತ ನೇತಾರರು ಭಾಗವಹಿಸಲಿದ್ದು ಕೆ ಐ ಸಿ ಕೇಂದ್ರ ಸಮಿತಿ ಅಧ್ಯಕ್ಷರಾದ ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬ ರವರು ಸಭಾಧ್ಯಕ್ಷತೆ ವಹಿಸಲಿದ್ದು ಕಾರ್ಯಕ್ರಮದಲ್ಲಿ ಕೇರಳ ಹಾಗೂ ಕರ್ನಾಟಕದಲ್ಲಿ ಚಿರಪರಿಚಿತ ವಾಗ್ಮಿ ಯುವ ಪಂಡಿತ ಪ್ರತಿಭೆ , ನೂತನ ವಾದಿಗಳ ಸದ್ದಡಗಿಸಿದ ಸುನ್ನತ್ ಜಮಾಅತ್ ನ ಸಿಡಿಲ ಪ್ರಭಾಷಣಕಾರ ಇರ್ಫಾನಿಯಾ ಅರೇಬಿಕ್ ಕಾಲೇಜ್ ಅಧ್ಯಕ್ಷರು , ಜಮಾಲಿಯ ಅರೇಬಿಕ್ ಕಾಲೇಜ್ ಪಾನೂರ್ ಇದರ ಪ್ರಾಂಶುಪಾಲರು ಆದ ಬಹು ಡಾ. ಎ ಸಲೀಂ ಫೈಝಿ ಇರ್ಫಾನಿ ಅಲ್ ಅಝ್-ಹರಿ ಯವರು ಮುಖ್ಯ ಪ್ರಭಾಷಣ ಗೈಯಲಿದ್ದು ಜೀಲಾನಿ ಸಂದೇಶ ನೀಡಲಿದ್ದಾರೆ.
ಅಲ್ಲದೆ ಕಾರ್ಯಕ್ರಮದಲ್ಲಿ ಕೆ ಐ ಸಿ ಕೇಂದ್ರ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ಅಸ್ಕರಲಿ ತಂಙಲ್ ಕೊಲ್ಪೆ ಯವರನ್ನೋಳಗೊಂಡು ಹಲವಾರು ಅನಿವಾಸಿ ಸಂಘ ಸಂಸ್ಥೆಗಳ ನೇತಾರರು , ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದು ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿಕೊಂಡರು . ಈ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದ ದುಬೈ ಸಮಿತಿ ಅಧೀನ ಘಟಕಗಳ ಪಧಾಧಿಕಾರಿಗಳು ಸಂಧರ್ಬ್ಹೊಜಿತವಾಗಿ ಮಾತನಾಡಿ ಮುಂದೆ ಕೆ ಐ ಸಿ ಯಾ ಬೆಳವಣಿಗೆ , ಹಾಗೂ ಜೀಲಾನಿ ಅನುಸ್ಮರಣಾ ಕಾರ್ಯಕ್ರಮದ ಯಶಸ್ಸಿನ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಿ ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ಕೆ ಐ ಸಿ ದುಬೈ ಸಮಿತಿ ಅಧ್ಯಕ್ಷರಾದ ಅಶ್ರಫ್ ಖಾನ್ ಮಾಂತೂರ್ ರವರು ಮಾತನಾಡಿ ಮುಂದೆ ಕೆ ಐ ಸಿ ಯು ಸಮುದಾಯದ ಆರ್ಥಿಕವಾಗಿ ಹಿಂದುಳಿದ ವಿಧ್ಯಾರ್ಥಿಗಳಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದು , ಪಧಾಧಿಕಾರಿಗಳಾದ ತಾವೆಲ್ಲರೂ ಯಾವುದೇ ಭೌಧಿಕ ಪ್ರತಿಪಲಾಪೇಕ್ಷೆಯಿಲ್ಲದೆ ನಿಸ್ವಾರ್ಥ ಮನೋಭಾವದೊಂದಿಗೆ ನಮ್ಮೊಂದಿಗೆ ಕೈಜೋಡಿಸಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕೇಳಿಕೊಂಡರು. ಕಾರ್ಯಕ್ರಮದಲ್ಲಿ ಕೆ ಐ ಸಿ ದುಬೈ ಸಮಿತಿ ಕಾರ್ಯದರ್ಶಿ ಹಮೀದ್ ಮಣಿಲ ರವರು ದುಬೈ ಸಮಿತಿ ಕಾರ್ಯಚಟುವಟಿಕೆ ಗಳ ಸಂಕ್ಷಿಪ್ತ ವಿವರಣೆಯನ್ನು ನೀಡಿದರು. ಅಸೀಫ್ ಮರೀಲ್ ರವರು ಸ್ವಾಗತಿಸಿ , ಕೆ ಐ ಸಿ ದುಬೈ ಸಮಿತಿ ಕೊಶಾದಿಕಾರಿ ಅಶ್ರಫ್ ಅರ್ಥಿಕೆರೆ ಯವರು ವಂದಿಸಿದರು.