“ದುಬೈ ಬಸವ ಸಮಿತಿ ಯು.ಎ.ಇ.” ಆಯೋಜಿಸಿದ ಮಕರ ಸಂಕ್ರಾಂತಿ ಹಬ್ಬವನ್ನು “ಪಾಕ ಸ್ಪರ್ಧೆ ಮತ್ತು ಆಹಾರ ಮೇಳ” 2016 ಜನವರಿ 15ನೇ ತಾರೀಕು ಶುಕ್ರವಾರ ಬೆಳಿಗ್ಗೆ 11.00 ಗಂಟೆಯಿಂದ 4.00 ಗಂಟೆಯವರೆಗೆ ದುಬಾಯಿ ಅಲ್ ಸಫಾದಲ್ಲಿರುವ ಜೆ. ಎಸ್. ಎಸ್. ಪ್ರವೈಟ್ ಸ್ಕೂಲ್ ಆವರಣದಲ್ಲಿ ಯಶಸ್ವಿಯಾಗಿ ನಡೆದು ಜನಮನ ಸೆಳೆಯಿತು.
ದುಬಾಯಿಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 40 ರಿಂದ 50 ಮಹಿಳಾ ಮತ್ತು ಮಕ್ಕಳು ಸ್ಪರ್ಧಿಗಳಾಗಿ ಪಾಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. “ಸಿಹಿ ತಿಂಡಿ ವಿಭಾಗ”, “ರೈಸ್ ಬಾತ್ ವಿಭಾಗ” ಮತ್ತು “ಮಕ್ಕಳ ವಿಭಾಗ”ದಲ್ಲಿ ಸಲಾಡ್ ಮತ್ತು ಸ್ವೀಟ್ ಪ್ರದರ್ಶನವಾಗಿತ್ತು. ವೈವಿಧ್ಯಮಯ ತಿಂಡಿ ತಿನಿಸುಗಳನ್ನು ಅಚ್ಚುಕಟ್ಟಾಗಿ ಅಲಂಕರಿಸಿ ಗಮನ ಸೆಳೆದ ವಿವಿಧ ವಿಭಾಗಗಳಲ್ಲಿ ಪಪ್ಪಾಯ ಹಲ್ವ, ಗೆಣಸಿನ ಹೋಳಿಗೆ,ನವಣಿ ಸಿಹಿ ಪೊಂಗಲ್, ಹೆಸರು ಬೇಳೆ ಪೊಂಗಲ್, ಅಂಟಿನ ಉಂಡೆ, ಶೆಂಗಾ ಹೋಳಿಗೆ, ಖರ್ಜೂರ ಹೋಳಿಗೆ, ಎಳ್ಳು ಹೋಳಿಗೆ,ಖರ್ಜೂರ ಹಲ್ವ, ಮಾದಲಿ, ಕ್ಯಾರೆಟ್ ಪಾಯಸ, ಬೇಸನ್ಉಂಡೆ ಹಾಗೂ ಗೋಡಂಬಿಹಲ್ವ, ನವರತ್ನ ಉಂಡೆ, ಗೋದಿಉಂಡೆ, ರಸಮಲಾಯ್, ಕುಸ್ಕಾ ವೆಜ್ ಬಾತ್, ಪುದಿನಾ ರೈಸ್, ಬಿಸಿಬೇಳೆ ಬಾತ್, ಅಲಸಂದಿಕಾಳು ಅನ್ನ, ಬಿರಂಜಿ ಅನ್ನ, ಬ್ರೋಕಾಲಿ ಅನ್ನ, ನವಣೆ ಖಿಚಡಿ, ಮೇಥಿ ಪಲಾವ್, ಮಕ್ಕಳ ವಿಭಾಗದಲ್ಲಿ – ಚಾಕೊಲೆಟ್ ಕೋಕನೆಟ್ ಕುಕ್ಕಿ, ಡ್ರೈಫ್ರೂಟ್ ಲಡ್ಡು, ರೈನ್ಬೋ ಸಲಾಡ್, ಕೆಂಪುಕಾರ ಮಂಡಕ್ಕಿ, ಚಾಕೋಲೆಟ್ ಲಡ್ಡು, ನೇಚುರಲ್ ಫ್ರೂಟ್ ಸಲಾಡ್ ಸರ್ವರ ಮನ ಸೆಳೆಯಿತು.
ಪಾಕ ಸ್ಪರ್ಧೆಯ ತೀರ್ಪುಗಾರರಾಗಿ ಡಾ. ಶೈಲಶ್ರೀ ಬಿ. ಹೊಂಗಲ್, ಶ್ರೀಮತಿ ಮಂಜುಳಾ ಗಣೇಶ್ ರೈ, ಡಾ. ಅಂಜಲಿ ಬಂಟ್ವಾಳ್ ವಿಜೇತರನ್ನು ಆಯ್ಕೆ ಮಾಡಿದರು. ಪಾಕ ಸ್ಪರ್ಧೆಯ ಜವಾಬ್ಧಾರಿಯನ್ನು ಶ್ರೀಮತಿ ಸುಮಾ ಗಾಜರೆ ಮತ್ತು ಶ್ರೀಮತಿ ಅನಿತಾ ದಂಡಿನ ವಹಿಸಿಕೊಂಡು ವ್ಯವಸ್ಥಿತವಾಗಿ ಯಶಸ್ವಿಗೊಳಿಸಿದರು.
ಸಂಜೆ ನಡೆದ ಸಮರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಡಾ. ಬಸವರಾಜ್ ವೈ. ಹೊಂಗಲ್, ಶ್ರೀ ಬಿ. ಕೆ. ಗಣೇಶ್ ರೈ, ಕಲಾವಿದೆ ಶ್ರೀಮತಿ ಕಸ್ತೂರಿ ಮೂಲಿಮನಿ ಹಾಗೂ ತೀರ್ಪುಗಾರರು ಪಾಲ್ಗೊಂಡರು. ಸರ್ವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಸಲ್ಲಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ ಪಾಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಿದರು.
ಹಾಲಿ ವರ್ಷದ ಬಸವ ಸಮಿತಿಯ ನೆತ್ರತ್ವ ವಹಿಸಿಕೊಂಡಿರುವ ಶ್ರೀ ರುದ್ರಯ್ಯ ನವಲಿ ಹಿರೇಮಠ್, ಶ್ರೀ ಮುರುಗೇಶ ಗಾಜರೆ, ಡಾ. ಶಿವಕುಮಾರ, ಶ್ರೀ ಚಂದ್ರಶೇಖರ ಲಿಂಗದಳ್ಳಿ, ಶ್ರೀ ಸಂಗಮೇಶ ಬಿಸರಳ್ಳಿ, ಶ್ರೀಯುತ ಮಲ್ಲಿಕಾರ್ಜುನ ಮುಳ್ಳೂರ, ಶ್ರೀಮತಿ ರೂಪಾ ನಂದೀಶ್, ಮತ್ತು ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರುಗಳ ಹಲವು ದಿನಗಳ ವ್ಯವಸ್ಥಿತ ಪೂರ್ವತಯಾರಿಯ ಫಲವೇ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಆಯೋಜಿಸಿದ ವಿಶೇಷ ಕಾರ್ಯಕ್ರಮ ಯಶಸ್ವಿಯಾಗಿ ದಾಖಲೆಯನ್ನು ನಿರ್ಮಿಸಿತ್ತು.
“ಆಹಾರ ಮೇಳ”ದಲ್ಲಿ
ಸಂಕ್ರಾಂತಿ ಹಬ್ಬದ ಆಹಾರ ಮೇಳದಲ್ಲಿ ಅತ್ಯಂತ ಸಂತಸ ಸಂಭ್ರಮದಿಂದ ಹಲವಾರು ಉತ್ಸಾಹಿ ಮಹಿಳಾಮಣಿಗಳು ತಮ್ಮ ತಮ್ಮ ಹಸ್ತ ಕೌಶಲ್ಯದಿಂದ ತಯಾರಿಸಿದ ಗಮ್ ಅಗಮಿಸುವ ರುಚಿ ರುಚಿಯಾದ ತಿಂಡಿ ತಿನಿಸಿಗಳನ್ನು ಸಿದ್ದಪಡಿಸಿದ್ದರು. ವಿಶಾಲ ಅವರಣದಲ್ಲಿ ಅಚ್ಚುಕಟ್ಟಾಗಿ ಪ್ರದರ್ಶಿಸಿ “ಆಹಾರಮೇಳ”ಕ್ಕೆ ಆಗಮಿಸಿದ್ದ ಸರ್ವರ ಗಮನ ಸೆಳೆದರು. ವಿವಿಧ ಮಳಿಗೆಗಳಲ್ಲಿ ವೈವಿಧ್ಯಮಯ ಖಾದ್ಯಗಳನ್ನು ಮಕ್ಕಳಿಂದ ಹಿರಿಯರೊಂದಿಗೆ ಸವಿದರು.
“ಆಹಾರ ಮೇಳ”ದ ಅವರಣ ಪ್ರವೇಶಿಸುವಾಗ ನೋಂದಣಿ ಕೌಂಟರ್ ನಲ್ಲಿ ಯುವರಾಜ್, ವಿನೀತ್ ರಾಜ್, ವೆಂಕಟರಮಣ ಕಾಮತ್ ಸರ್ವರನ್ನು ಬರಮಾಡಿಕೊಳ್ಳುತ್ತಿದರು. ಮುಂದೆ ಸಾಗುತ್ತಿದ್ದಂತೆ ಶ್ರೀಮತಿ ಜ್ಯೋತಿ ಬಡ್ಡಿ ಯವರು ಮನೆಯಲ್ಲಿ ಬೆಳೆಸಿದ್ದ ಜವಾರಿ ಕರಿಬೇವಿನ ಸೊಪ್ಪು ಪ್ರದರ್ಶನದಲ್ಲಿ ತನ್ನ ಪರಿಮಳ ಹರಡಿದ್ದರೆ,ಖಡಕ್ ಚಾಯ್,ಘಮ ಘಮಿಸುವ ಕಾಫಿ, ಸುವಾಸನೆಯಿಂದ ಪ್ರಥಮ ಸ್ಟಾಲಿನಲ್ಲಿ ಸರ್ವರನ್ನು ಸ್ವಾಗತಿಸುತ್ತಿತ್ತು. ನಂತರ ರುಚಿ ರುಚಿಯಾದ ಪಡ್ದು, ಸಿಹಿ ಪೊಂಗಲ್,ವಿಧವಿಧ ಚಟ್ನಿ, ಕಾಯಿ ಹೋಳಿಗೆ,ಶುಂಠಿ ಕಷಾಯ, ಮಸಾಲೆ ಮಜ್ಜಿಗೆಯನ್ನು ಕು. ಅಭಿಶೇಕ, ಶ್ರೀಮತಿಯರಾದ ರಕ್ಷಿತಾ ಗಣವಾರಿ, ಉಮಾ ವಿದ್ಯಾಧರ್, ಪೂಜಾ ಬೋರಣ್ಣನವರ್, ಶುಭದಾ ಗುಂಜಾಳ, ವಿದ್ಯಾಧರ ಹಿರೇಮಠ್. ಇವರೆಲ್ಲರೂ ನಗುಮೊಗದಿಂದ ಕೊಡುತ್ತಿದ್ದರು.
“ಬೆಂಗಳೂರು ಚಿನಕುರುಳಿ ಚಾಟ್ಸ್” ಕು. ಐಶ್ವರ್ಯ ಶ್ರೀನಾಥ್, ಕು. ಅರುಷ್ ಕೋರಾ ರವರ ಸ್ಟಾಲ್ ನಲ್ಲಿ ಗೆಡ್ಡೆ ಕೋಸು ಚಾಟ್, ಪ್ಲೋಟಿಂಗ್ ಟಿಕ್ಕಿ, ಫ್ಲೋಟಿಂಗ್ ಭೋಟಿ, ಬೇಲ್ ಪೂರಿ, ಟಿಕ್ಕಿ, ಖಾರ ಕಡಲೆ ಪುರಿ, ಒಗ್ಗರಣೆ ಅವಲಕ್ಕಿ ಇತ್ಯದಿ ಹಲವಾರು ವಿವಿಧ ರುಚಿ ರುಚಿಯಾದ ತಿಂಡಿ ತಿನಿಸುಗಳು ಲಭ್ಯವಾಗಿತ್ತು.
ಸಂಕ್ರಾಂತಿ ಭೋಗಿ ಊಟ, ಬದ್ನೆ ಕಾಯ್ ಭರ್ತಾ, ಶೆಂಗಾ ಚಟ್ನಿ, ಶೇಂಗಾ ಉಸಳಿ, ಅಗಸಿ ಚಟ್ನಿ, ರೋಟಿ ಚಪಾತಿ, ಕೆಂಪು ಖಾರ, ಜೋಳದ ಬಾನ, ಮಾದಲಿ ತುಪ್ಪ, ಗಜರಿ ಚಟ್ನಿ, ವಡೆಯಣಕ, ಮೊಸರನ್ನ, ನವಣೆ ಪೊಂಗಲ್, ಈರುಳ್ಳಿ ಚಟ್ನಿ, ಬದ್ನೆಕಾಯ್ ಚಟ್ನಿ ಪ್ರದರ್ಶನ ಮೂಲಕ ಗಮನ ಸೆಳೆದವರು ಶ್ರೀಮತಿ ಲಕ್ಷ್ಮೀ ಲಿಂಗದಳ್ಳಿ, ರಜನಿ ಕಪಲಿ, ಮಂಜುಳಾ ಗೌಡ, ಹರ್ಷದ್ ಪಾವಟೆ.
“ರಾ. ರೆ. ರೂ. ಸ್ಟಾಲ್” ನಲ್ಲಿ ಶ್ರೀಮತಿ ರಾಜೇಶ್ವರಿ, ರೇಖಾ, ರೋಹಿಣಿ ಇವರುಗಳು ಶ್ರೀಖಂಡ, ಹುಗ್ಗಿ, ಗಿನ್ನ, ಕರಂಡಿ, ಬೆಳ್ಳುಳ್ಳಿ ಖಾರ, ಬಿರಿಯಾನಿ, ಕಾರ ಚಾಟ್, ಕಾರ್ನ್ ಫ್ಲವರ್ ಚಾಟ್, ಮೋಕ್ ಟೈ ಜ್ಯೂಸ್ ಪ್ರದರ್ಶನವಾಗಿತ್ತು.
ಶ್ರೀಮತಿ ಡಾ. ಮಮತಾ, ಸವಿತಾ ಪರಡ್ಡಿ, ಗಾಯತ್ರಿ ಪಾಟೀಲ್, ಅಂಜನಾ ಹಿರಡ್ಡಿ, ಸ್ಮಿತಾ ರಡ್ಡೆರ ರವರ ಕೈಚಳಕದಿಂದ ಸಾಗು ವಡೆ, ಮಿರ್ಚಿ ಬೊಂಡಾ, ಸೂಸ್ಲ (ಚುರುಮುರಿಯಲ್ಲಿ), ಲಡಕಿ ಲಾಡ್, ಗೋಕಾಕ್ ಸ್ಪೆಷಲ್, ಜೋಳದ ವಡೆ, ಬದ್ನೆಕಾಯ್ ಎಣ್ಣಕಾಯ್, ಜುನಕದ ವಡೆ, ಮಡಿಕಿ ಉಸಳಿ, ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಶೇಂಗಾ ಚಟ್ನಿ, ಅಗಸಿ ಚಟ್ನಿ, ಬೆಳ್ಳುಳ್ಳಿ ಖಾರ, ಬಾಣ(ಮೊಸರ ಬುತ್ತಿ), ಎಳ್ಳು ಹೋಳಿಗೆ, ಸರ್ವರ ಮನ ಸೆಳೆಯಿತು.
ಈರುಳ್ಳಿ ಫ್ರೈಡ್ ಅವಲಕ್ಕಿ, ವಾಂಗಿಬಾತ್ ಪೌಡರ್, ಶ್ರೀಮತಿರಾದ ಮಾಲತಿ ದೊಡ್ಡಮನಿ, ಮಮತಾ ವಿಜಯಕುಮಾರ್ ಸ್ಟಾಲ್ ನಲ್ಲಿಯೇ ತಯಾರಿಸಿ ಕೊಡುತ್ತಿದರು.
ಮಧ್ಯೆ ಮಧ್ಯೆ ತಾಯ್ನಾಡಿನ ಕನ್ನಡ ಚಿತ್ರಗೀತೆಗಳನ್ನು ಅದ್ಭುತವಾಗಿ ಹಾಡಿ ಪ್ರತಿಭಾವಂತಗಾಯಕ ಪ್ರಿಸಿಜನ್ ಗ್ರೂಪ್ ನ ಶ್ರೀ ವಿನೋದ್ ರಂಜಿಸಿದರೆ ಪಿಲಿಪೈನ್ಸ್ ನ ಶ್ರೀ ಬೊಂಗ್.,ಡಿ.ಜೆ.ಆಗಿ ಸಹಕರಿಸಿದರು. “ಆಹಾರಮೇಳ” ದಿನಪೂರ್ತಿ ಸರ್ವರ ಮೆಚ್ಚುಗೆಗೆ ಪಾತ್ರವಾಗಿ ಮನಸಾರೆ ಬಸವ ಸಮಿತಿಯ ವಿಶೇಷ ಕಾರ್ಯಕ್ರಮಕ್ಕೆ ಅಭಿನಂದನೆ ಸಲ್ಲಿಸಿದರು.
ಆಹಾರ ಮೇಳದ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿರುವ ಶ್ರೀಮತಿ ಡಾ. ಮಮತಾ, ಶ್ರೀಮತಿ ಲಕ್ಷ್ಮಿ ಲಿಂಗದಳ್ಳಿ, ಶ್ರೀಮತಿ ನಾಗವೇಣಿ ಹಿಂಡೇರ, ಶ್ರೀಮತಿ ರೋಹಿಣಿ ರುದ್ರಯ್ಯ ಹಾಗು ಶ್ರೀಮತಿ ಜ್ಯೋತಿ ಬಡ್ಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಬಿ. ಕೆ. ಗಣೇಶ್ ರೈ – ಯು.ಎ.ಇ.