ಕರ್ನಾಟಕ

ಬೆಂಗಳೂರು: ಯುವಕರ ನಡುವೆ ಗುಂಪು ಘರ್ಷಣೆ-ಓರ್ವನ ಕೊಲೆ

Pinterest LinkedIn Tumblr

koleಬೆಂಗಳೂರು,ಜ.೧೮- ಎರಡು ಗುಂಪುಗಳ ನಡುವಿನ ಘರ್ಷಣೆ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ದುರ್ಘಟನೆ ಆರ್‌ಟಿನಗರದ ಗಂಗೇನಹಳ್ಳಿಯಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.

ಗಂಗೇನಹಳ್ಳಿಯ ಅರುಣ್ ಕುಮಾರ್(೨೩) ಕೊಲೆಯಾದ ಯುವಕನಾಗಿದ್ದಾನೆ,ಪ್ಯಾಲೇಸ್‌ನಲ್ಲಿ ಕೇಟರಿಂಗ್ ಕೆಲಸ ಮಾಡುವ ಯುವಕರು ಮತ್ತು ಗಂಗೇನಹಳ್ಳಿಯ ಯುವಕರ ಮಧ್ಯೆ ನಿನ್ನೆ ರಾತ್ರಿ ಗಂಗೇನಹಳ್ಳಿಯ ೨ನೇ ಕ್ರಾಸ್‌ನಲ್ಲಿ ಜಗಳ ಉಂಟಾಗಿದೆ.

ಜಗಳ ವಿಕೋಪಕ್ಕೆ ತಿರುಗಿದಾಗ ಕ್ಯಾಟರಿಂಗ್ ಯುವಕರು ಗಂಗೇನಹಳ್ಳಿಯ ಅರುಣ್ ಮತ್ತು ದರ್ಶನ್‌ಗೆ ದೊಣ್ಣೆಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಾಯಗೊಂಡ ಇಬ್ಬರನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಲಾಯಿತಾದರೂ ಗಂಭೀರವಾಗಿ ಗಾಯಗೊಂಡಿದ್ದ ಅರುಣ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಬಲಗೈಗೆ ಗಾಯವಾಗಿರುವ ದರ್ಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ,ಘಟನೆಯಲ್ಲಿ ರಿಟ್ಜ್ ಕಾರ್ ಜಖಂಗೊಳಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಆರ್‌ಟಿ ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಸ್ಥಳಕ್ಕೆ ಡಿಸಿಪಿ ಸುರೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Write A Comment