ಮಂಗಳೂರು,ಜ.19: ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಪ್ರವೀಣ್ ತೊಗಾಡಿಯಾರಿಗೆ ಮಂಗಳೂರು ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಪ್ರವೀಣ್ ತೊಗಾಡಿಯಾ ಅವರು ನಾಳೆ ಮಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರಿದ್ದರು. ಆದರೆ ಉದ್ರೇಕಕಾರಿ ಭಾಷಣದಿಂದಾಗಿ ಮಂಗಳೂರಿನ ಶಾಂತಿ ಕದಡುವ ಸಾಧ್ಯತೆಗಳಿರುವ ಕಾರಣ ನೀಡಿ ತೊಗಾಡಿಯಾ ವಿರುದ್ಧ ಕಲಂ 144 (3) ಸಿ.ಆರ್.ಪಿ.ಸಿ. ಅನ್ವಯ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ದಿನಾಂಕ 18-01-2016 ರಿಂದ 24-01-2016 ರ ವರೆಗೆ ಪ್ರವೇಶ ಮತ್ತು ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳದಂತೆ ಮಂಗಳೂರು ನಗರ ಪೊಲೀಸ್ ಅಯುಕ್ತರಾದ ಚಂದ್ರಶೇಖರ್ ಅವರು ನಿಷೇಧಾಜ್ಞೆ ಹೊರಡಿಸಿದ್ದಾರೆ.
ಈ ಅವಧಿಯಲ್ಲಿ ಅವರು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯೊಳಗೆ ಪ್ರವೇಶಿಸಿ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಿಲ್ಲ. ಅವರ ಪ್ರವೇಶದಿಂದ ನಗರದಲ್ಲಿ ಸಾರ್ವಜನಿಕ ಶಾಂತತೆಗೆ ಭಂಗವುಂಟಾಗಬಹುದು ಎಂಬುದನ್ನು ಪರಿಗಣಿಸಿ ಪೊಲೀಸ್ ಇಲಾಖೆ ಈ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಡಳಿತಾ ತಿಳಿಸಿದೆ.