ಕರ್ನಾಟಕ

ನನ್ನ ಮಗ ನಿರಪರಾಧಿ, ಮುಗ್ಧ :ಮೌಲಾನಾ ಖಾಸ್ಮಿ ತಂದೆ

Pinterest LinkedIn Tumblr

maulana-khasmiಬೆಂಗಳೂರು: ನನ್ನ ಮಗ ನಿರಪರಾಧಿ, ಆತ ಮುಗ್ಧ ಎಂದು ಆಲ್-ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ಬಂಧಿತನಾಗಿರುವ ಬೆಂಗಳೂರು ಮೂಲದ ಪಾದ್ರಿ ಮೌಲ್ವಿ ಮೌಲಾನಾ ಸೈಯದ್‌ ಅನ್ಸರ್‌ ಶಾ ಖಾಸ್ಮಿ ತಂದೆ ಹೇಳಿಕೆ ನೀಡಿದ್ದಾರೆ. ಇನ್ನೊಂದೆಡೆ ರಾಜ್ಯ ಸರ್ಕಾರ ಮೌಲಾನಾನನ್ನು ತನಿಖೆ ನಡೆಸುತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ದೆಹಲಿ ಪೊಲೀಸರು ಮೌಲಾನಾನನ್ನು ಆಲ್ -ಖೈದಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಪ್ರಗತಿ ಬಗ್ಗೆ ನಾನು ಅಭಿಪ್ರಾಯವನ್ನು ತಿಳಿಸುವುದಿಲ್ಲ. ಮೌಲಾನಾ ತನಿಖೆಗೆ ಸಹಕಾರ ನೀಡುವಂತೆ ಸಿದ್ದರಾಮಯ್ಯ ಸರ್ಕಾರದ ಮೇಲೆ ಒತ್ತಡ ಕೇಳಿಬರುತ್ತಿದೆ.

”ನನ್ನ ಮಗ ಒಬ್ಬ ಮುಸಲ್ಮಾನ ವಿದ್ವಾಂಸ ಮತ್ತು ಪಾದ್ರಿಯಷ್ಟೆ. ನನ್ನ ಮಗ ದೇಶ ವಿರೋಧಿ ಭಾಷಣದಲ್ಲಿ ಅಥವಾ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾನೆಯೇ ಎಂದು ಮಾಧ್ಯಮಗಳು ಎಲ್ಲಾ ಮೂಲಗಳಿಂದಲೂ ತನಿಖೆ ನಡೆಸಬೇಕು. ಎಲ್ಲಾ ದೃಷ್ಟಿಕೋನದಿಂದ ನೋಡಬೇಕು. ಅವನು ಯಾವುದೇ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿಲ್ಲ. ನನ್ನ ಮಗನ ವಿರುದ್ಧ ಪಿತೂರಿ ನಡೆಸಲಾಗಿದೆ ಎಂದು ಮೌಲಾನಾ ತಂದೆ ಮೋಮಿನ್ ಶಾ ಖಾಸ್ಮಿ ಹೇಳಿದ್ದಾರೆ.

Write A Comment