ಕರ್ನಾಟಕ

ಬಿಬಿಎಂಪಿಯನ್ನು 10 ವಲಯಗಳಿಗೆ ವಿಸ್ತರಿಸುವ ಸರ್ಕಾರದ ಕ್ರಮಕ್ಕೆ ಆರಂಭದಲ್ಲೇ ಅಪಸ್ವರ

Pinterest LinkedIn Tumblr

BBMP-fiಬೆಂಗಳೂರು, ಜ.13-ಬಿಬಿಎಂಪಿ ಆಡಳಿತವನ್ನು ಸರಳೀಕರಣಗೊಳಿಸುವ ಉದ್ಧೇಶದಿಂದ ಹಾಲಿ ಇದ್ದ 8 ವಲಯಗಳನ್ನು 10 ವಲಯಗಳಿಗೆ ವಿಸ್ತರಿಸಿದ ಸರ್ಕಾರದ ಕ್ರಮಕ್ಕೆ ಆರಂಭದಲ್ಲೇ ಅಪಸ್ವರ ಕೇಳಿಬಂದಿದೆ.

ಸುಲಭ ಆಡಳಿತ ನಡೆಸುವ ಸಲುವಾಗಿ ಬಿಬಿಎಂಪಿ ವ್ಯಾಪ್ತಿಯ 8 ವಲಯಗಳನ್ನು 10ಕ್ಕೆ ಹೆಚ್ಚಿಸಲು ನಿರ್ಧರಿಸಿ ವಿಸ್ತರಿಸಲು ನೇಮಕವಾಗಿದ್ದ ಸಮಿತಿ ರೂಪಿಸಿದ್ದ ಕ್ರಮ ಅಸಮಂಜಸವಾಗಿದೆ. ಇದರಿಂದ  ಆಡಳಿತ ಸರಳೀಕರಣವಾಗುವ ಬದಲು ಕಗ್ಗಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಗೊಂದಲವನ್ನು ಬಗೆಹರಿಸಿ ವಲಯಗಳನ್ನು ವಿಸ್ತರಿಸಬೇಕೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಸರ್ಕಾರಕ್ಕೆ ಮನವಿ ಮಾಡಿದೆ.

ಈ ಕುರಿತು ಮಾತನಾಡಿರುವ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ, ಬಿಬಿಎಂಪಿ ವಲಯಗಳನ್ನು ವಿಸ್ತರಿಸಿರುವ ಕ್ರಮ ಅಸಮಂಜಸವಾಗಿದೆ. ವಾರ್ಡ್‌ವಾರು ವಲಯಗಳನ್ನು ರೂಪಿಸಲಾಗಿದೆ. ಇದಕ್ಕೆ ಬದಲಾಗಿ ವಿಧಾನಸಭಾವಾರು ವಲಯಗಳನ್ನು ರೂಪಿಸಿದರೆ ಆಡಳಿತ ಸರಳೀಕರಣಕ್ಕೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಧಿಕಾರಿಗಳು ಜನಸಂಖ್ಯೆಯ ಆಧಾರದ ಮೇಲೆ ಭೌಗೋಳಿಕವಾಗಿ ವಲಯಗಳನ್ನು ವಿಸ್ತರಿಸಿ ಕ್ರಮ ಕೈಗೊಂಡಿದ್ದಾರೆ. ಆದರೆ, ವಿಧಾನಸಭಾ ಕ್ಷೇತ್ರವಾರು ವಲಯಗಳನ್ನು ರೂಪಿಸಿದರೆ ಆಡಳಿತಕ್ಕೆ ಅನುಕೂಲವಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಯಶವಂತಪುರ ವಿಧಾನಸಭಾ ಕ್ಷೇತ್ರವನ್ನು ಮೂರು ವಲಯಗಳಿಗೆ ವಿಸ್ತರಿಸಲಾಗಿದೆ. ಇದರಿಂದ ಅಲ್ಲಿನ ವಾರ್ಡ್‌ಗಳ ಕೆಲಸ ಕಾರ್ಯಗಳಿಗೆ ಅನಾನುಕೂಲವಾಗುತ್ತದೆ. ಇದರಂತೆ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ವಿವಿಧ ವಲಯಗಳಿಗೆ ವಿಂಗಡಿಸಿ ವಿಸ್ತರಿಸಲಾಗಿದೆ. ಇದರಿಂದ ದೈನಂದಿನ ಕೆಲಸಗಳಿಗೆ ಅಡಚಣೆಯಾಗುತ್ತದೆ. ಕೂಡಲೇ ಸರ್ಕಾರ ಈ ಕ್ರಮವನ್ನು ಹಿಂದಕ್ಕೆ ಪಡೆದು, ವಿಧಾನಸಭಾ ಕ್ಷೇತ್ರವಾರು ಆಧರಿಸಿ ವಲಯಗಳ ವಿಸ್ತರಣೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಯಲಹಂಕ, ದಾಸರಹಳ್ಳಿ, ಗೋವಿಂದರಾಜನಗರ, ಪದ್ಮನಾಭನಗರ, ಬೊಮ್ಮನಹಳ್ಳಿ, ಜಯನಗರ, ಮಹದೇವಪುರ, ಕೆ.ಆರ್‌ಪುರಂ, ಮಲ್ಲೇಶ್ವರಂ, ರಾಜಾಜಿನಗರ ಹೀಗೆ ಹತ್ತು ವಲಯಗಳನ್ನು ಮಾಡಲಾಗಿದೆ.
ಯಲಹಂಕ ವಲಯಕ್ಕೆ ವಾರ್ಡ್ ನಂ.1 ರಿಂದ 11ರವರೆಗೆ 11 ವಾರ್ಡ್‌ಗಳನ್ನು ಸೇರಿಸಲಾಗಿದ್ದು, 3 ವಿಧಾನಸಭಾ ಕ್ಷೇತ್ರದ ಹಲವು ಭಾಗಗಳನ್ನು ಈ ವಲಯಕ್ಕೆ ಸೇರಿಸಲಾಗಿದೆ. ಅದೇ ರೀತಿ ದೇವನಹಳ್ಳಿ ವಲಯಕ್ಕೆ ವಾರ್ಡ್ ನಂ. 12, 13, 14, 15, 16, 38, 39, 40, 70, 71 ಹಾಗೂ 41ನೇ ವಾರ್ಡ್‌ನ್ನು ಸೇರಿಸಿದ್ದು ಈ ವಲಯಕ್ಕೂ ಮೂರು ವಿಧಾನಸಭಾ ಕ್ಷೇತ್ರದ ಭಾಗಗಳನ್ನು ಸೇರಿಸಲಾಗಿದೆ.
ಗೋವಿಂದರಾಜನಗರ ವಲಯಕ್ಕೆ 23 ವಾರ್ಡ್‌ಗಳನ್ನು ಅಂದರೆ ವಾರ್ಡ್ ನಂ. 72, 130, 159, 129, 73, 131, 158, 132, 138, 134, 157, 141, 140, 139, 119, 118, 108, 104, 125, 126, 127 ಹಾಗೂ 128 ವಾರ್ಡ್‌ಗಳನ್ನು ಸೇರಿಸಿದ್ದು, ಆರು ವಿಧಾನಸಭಾ ಕ್ಷೇತ್ರದ ಭಾಗಗಳು ಸೇರಿವೆ.

ಪದ್ಮನಾಭನಗರ ವಲಯಕ್ಕೆ ವಾರ್ಡ್ ನಂ. 198, 196, 160, 161, 162, 156, 155, 142, 154, 167, 166, 180, 181, 185, 195, 197, 184, 182, 165, 164, 163 ವಾರ್ಡ್‌ಗಳನ್ನು ಸೇರಿಸಿ, ಆರು ವಿಧಾನಸಭಾ ಕ್ಷೇತ್ರಗಳನ್ನು ಸೇರ್ಪಡೆ ಮಾಡಲಾಗಿದೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ವಾರ್ಡ್ ನಂ. 186, 187, 193, 194, 192, 191, 188, 175, 189, 190, 174 ಒಟ್ಟು 12 ವಾರ್ಡ್‌ಗಳನ್ನು ಸೇರಿಸಿ ಎರಡು ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಲಾಗಿದೆ. ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ವಾರ್ಡ್ ನಂ. 117, 116, 115, 114, 148, 151, 173, 172, 176, 177, 178, 179, 168, 144, 170, 171, 152, 146, 147, 153, 169 ಒಟ್ಟು 21 ವಾರ್ಡ್‌ಗಳನ್ನು ಸೇರಿಸಿ 4 ವಿಧಾನಸಭಾ ಕ್ಷೇತ್ರಗಳನ್ನು ಸೇರ್ಪಡೆ ಮಾಡಿದೆ.

ಮಹದೇವಪುರ ವಲಯ ಕಚೇರಿಗೆ ಕೇವಲ 7 ವಾರ್ಡ್‌ಗಳನ್ನು ಸೇರಿಸಿ ಒಂದು ವಿಧಾನಸಭಾ ಕ್ಷೇತ್ರವನ್ನು ವ್ಯಾಪ್ತಿಗೆ ಒಳಪಡಿಸಲಾಗಿದೆ. ಕೆ.ಆರ್‌ಪುರಂ ವಲಯಕ್ಕೆ ವಾರ್ಡ್ ನಂ. 113, 87, 88, 58, 81, 56, 55, 52, 53, 54, 26, 25, 24, 23, 30, 29, 27, 51, 50, 57, 49, 59, 28, 80 ಸೇರಿದಂತೆ ಒಟ್ಟು 25 ವಾರ್ಡ್‌ಗಳನ್ನು ಸೇರಿಸಿ 4 ವಿಧಾನಸಭಾ ಕ್ಷೇತ್ರದ ಭಾಗಗಳನ್ನು ಸೇರ್ಪಡೆ ಮಾಡಲಾಗಿದೆ.
ಮಲ್ಲೇಶ್ವರಂ ವಲಯಕ್ಕೆ 26 ವಾರ್ಡ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ವಾರ್ಡ್ ನಂ. 69, 43, 42, 44, 45, 37, 17, 75, 74, 102, 68, 67, 66, 35, 65, 76, 36, 18, 19, 20, 21, 22, 33, 34, 46, 64 ವಾರ್ಡ್‌ಗಳು ಸೇರಿದಂತೆ ನಾಲ್ಕು ವಿಧಾನಸಭಾ ಕ್ಷೇತ್ರಗಳ ಭಾಗಗಳನ್ನು ಸೇರಿಸಲಾಗಿದೆ.

ರಾಜಾಜಿನಗರ ವಲಯಕ್ಕೆ ವಾರ್ಡ್ ನಂ. 101, 100, 107, 108, 121, 120, 95, 96, 97, 98, 99, 77, 94, 109, 110, 93, 63, 92, 91, 90, 78, 60, 62, 64, 47, 48, 31, 32 ಸೇರಿದಂತೆ ನಾಲ್ಕು ವಿಧಾನಸಭಾ ಕ್ಷೇತ್ರದ 25 ವಾರ್ಡ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಈ ರೀತಿ ಮಾಡಿರುವುದರಿಂದ ಆಡಳಿತಕ್ಕೆ ಅಡಚಣೆಯಾಗುತ್ತದೆ. ವಿಧಾನಸಭಾ ಕ್ಷೇತ್ರಗಳನ್ನು ವಲಯ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು. ಆದರೆ ಪ್ರಸ್ತುತ ಮಾಡಿರುವ ಕ್ರಮದಲ್ಲಿ  ಒಂದು ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳನ್ನು ಬೇರೆ-ಬೇರೆ ವಲಯಗಳಿಗೆ ವಿಂಗಡಿಸಲಾಗಿದೆ. ಈ ಕ್ರಮ ಅಸಮಂಜಸವಾಗಿದ್ದು 10 ವಲಯಗಳಿಗೆ ಬಿಬಿಎಂಪಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳನ್ನು ಸೇರ್ಪಡೆ ಮಾಡಿ ವಲಯಗಳನ್ನು ರೂಪಿಸಬೇಕು ಎಂಬ ಅಭಿಪ್ರಾಯವನ್ನು ಸ್ಥಾಯಿ ಸಮಿತಿ ವ್ಯಕ್ತಪಡಿಸಿದೆ.

ಪ್ರಸ್ತುತ ವಿಸ್ತರಣೆಯಾಗಿರುವ ವಲಯಗಳಲ್ಲಿ ಮಹದೇವಪುರದಲ್ಲಿ ಕೇವಲ 7 ವಾರ್ಡ್‌ಗಳಿದ್ದರೆ ಮಲ್ಲೇಶ್ವರಂನಲ್ಲಿ 26 ವಾರ್ಡ್‌ಗಳಿವೆ.ಅಧಿಕಾರಿಗಳು ವೈಜ್ಞಾನಿಕವಾಗಿ ವಲಯಗಳನ್ನು ವಿಸ್ತರಣೆ ಮಾಡಿಲ್ಲ. ಕೇವಲ ಭೌಗೋಳಿಕ ಹಾಗೂ ಜನಸಂಖ್ಯೆಯ ಆಧಾರದ ಮೇಲೆ ವಲಯಗಳನ್ನು ವಿಸ್ತರಿಸಿದ್ದಾರೆ. ಸರ್ಕಾರ ಈ ಕ್ರಮವನ್ನು ಸರಿಪಡಿಸಬೇಕೆಂದು ಸಮಿತಿ ಅಧ್ಯಕ್ಷ ರಾಜಣ್ಣ ಆಗ್ರಹಿಸಿದ್ದಾರೆ.

Write A Comment