ಕರ್ನಾಟಕ

ಬಾದಾಮಿ ಬಳಿ ಭೀಕರ ರಸ್ತೆ ಅಪಘಾತ; ಸ್ಥಳದಲ್ಲೇ 3 ಸಾವು:7 ಮಂದಿಗೆ ಗಂಭೀರ ಗಾಯ

Pinterest LinkedIn Tumblr

Badami accident

ಬಾದಾಮಿ: ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಪಲ್ಟಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಕೆರೂರು ಗ್ರಾಮದಲ್ಲಿ ನಡೆದಿದೆ.

ಬಾಗಲಕೋಟೆಯ ಬಾದಾಮಿಯ ಕೆರೂರು ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೌಟುಂಬಿಕ ಕಲಹ ಸಂಧಾನ ವಿಚಾರವಾಗಿ ಅಕ್ಕಲಕೋಟೆಯಿಂದ ಬಾದಾಮಿಯ ಮುಕವಿಗೆ ಬರುತ್ತಿದ್ದಾಗ ಕೆರೂರು ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಲ್ಟಿ ಹೊಡೆದಿದೆ. ಪರಿಣಾಮ ಮೂರು ಮಂದಿ ಸಾವನ್ನಪ್ಪಿದ್ದು, 7 ಮಂದಿಗೆ ಗಂಭೀರ ಗಾಯಗಳಾಗಿವೆ.

ಮೃತರನ್ನು ಮಹಾರಾಷ್ಟ್ರದ ಕರಿಯಪ್ಪ(40), ವಿಜಯಪುರದ ಗುಂಡಪ್ಪ(60) ಹಾಗೂ ಕಬ್ಬಾ(50) ಎಂದು ಗುರುತಿಸಲಾಗಿದೆ. ಇನ್ನುಳಿದಂತೆ ಗಾಯಾಳುಗಳನ್ನು ಬಾದಾಮಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment