ಮುಂಬೈ

ಕಲಾವಿದೆ ಹೇಮಾ ಉಪಾಧ್ಯಾಯ ಕೊಲೆ ಪ್ರಕರಣ: ಚಿಂತನ್ ಉಪಾಧ್ಯಾಯ ಬಂಧನ

Pinterest LinkedIn Tumblr

hema-chintan

ಮುಂಬಯಿ: ಕಲಾವಿದೆ ಹೇಮಾ ಉಪಾಧ್ಯಾಯ ಮತ್ತು ಆಕೆಯ ವಕೀಲ ಹರೀಶ್ ಭಂಭಾನಿ ಕೊಲೆ ಪ್ರಕರಣ ಸಂಬಂಧ ಹೇಮಾ ಉಪಾಧ್ಯಾಯ ಪತಿ ಚಿಂತನ್ ಉಪಾಧ್ಯಾಯನನ್ನು ಸಂಬಂಧ ಮುಂಬಯಿ ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 11 ರಂದು ಮುಂಬಯಿಯ ಚರಂಡಿಯಲ್ಲಿ ಬಾಕ್ಸ್ ವೊಂದರಲ್ಲಿ ಈ ಇಬ್ಬರ ಮೃತ ದೇಹಗಳು ಪತ್ತೆಯಾಗಿದ್ದವು.

ಚಿಂತನ್ ಉಪಾಧ್ಯಾಯ ಅವರನ್ನು ವಿಚಾರಣೆಗಾಗಿ ಕಂಡಿವಿಲಿ ಠಾಣೆಗೆ ಕರೆಸಿದ ಪೊಲೀಸರು ನಂತರ ಅವರನ್ನು ಬಂಧಿಸಿದ್ದಾರೆ. ಇನ್ನು ಆತನನ್ನು ಮೆಟ್ರೋ ಪಾಲಿಟನ್ ಕೋರ್ಟ್ ಗೆ ಇಂದು ಹಾಜರು ಪಡಿಸಲಿದ್ದಾರೆ.ಡಿಸೆಂಬರ್ 12 ರಂದು ಮುಂಬಯಿಯ ಡಂಕುರ್ ವಾಡಿ ಪ್ರದೇಶದ ಮೋರಿಯಲ್ಲಿ ಹೇಮಾ ಉಪಾಧ್ಯಾಯ ಮತ್ತು ಆಕೆಯ ವಕೀಲನ ಶವ ಪತ್ತೆಯಾಗಿತ್ತು.

ಇನ್ನು ಪ್ರಕರಣ ಸಂಬಂಧ ವಿದ್ಯಾಧರ್ ರಾಜ್ಬಾರ್ ಮೇಲೂ ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದಾರೆ. ಪ್ರಕರಣ ಸಂಬಂಧ ಇದುವರೆಗೂ ಐವರನ್ನು ಬಂಧಿಸಲಾಗಿದೆ. ಹೇಮಾಳನ್ನು ಚಿಂತನ್ ಕೊಲೆ ಮಾಡಿದ್ದಾನೆ. ಆತ ಈ ಮೊದಲು ಹೇಮಾಳಿಗೆ ಕೊಲ್ಲುವ ಬೆದರಿಕೆ ಒಡ್ಡಿದ್ದ. ಹೀಗಾಗಿ ಎಫ್ ಐ ಆರ್ ನಲ್ಲಿ ಆತನ ಹೆಸರನ್ನು ಮೊದಲಿಗೆ ಸೇರಿಸಬೇಕು. ಆಸ್ತಿಗಾಗಿ ಹೇಮಾಳನ್ನು ಕೊಲೆ ಮಾಡಲಾಗಿದೆ ಎಂದು ಹೇಮಾ ಸಂಬಂಧಿಕರು ಆರೋಪಿಸಿದ್ದಾರೆ.

Write A Comment