ಕರ್ನಾಟಕ

ರಸ್ತೆಯಲ್ಲೇ ಪ್ರವಾಸಿಗರ ಮಿನಿಬಸ್ ಸುಟ್ಟು ಭಸ್ಮ

Pinterest LinkedIn Tumblr

busಹಿರಿಯೂರು, ಡಿ.14- ನಗರಕ್ಕೆ ಸಮೀಪದ ವಿವಿಪುರ ರಸ್ತೆಯಲ್ಲಿ ಬೀರೇನಹಳ್ಳಿ ಬಳಿ ಪ್ರವಾಸಿಗರ ಮಿನಿಬಸ್‌ಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

ಬೆಂಗಳೂರಿನ ಬನ್ನೇರುಘಟ್ಟದ ಕುಟುಂಬವೊಂದು ಲಕ್ಷ್ಮೀ ಟ್ರಾವಲ್ಸ್‌ಗೆ ಸೇರಿದ್ದ  ಮಿನಿ ಬಸ್‌ನಲ್ಲಿ ಪ್ರವಾಸಕ್ಕಾಗಿ ಹಿರಿಯೂರು ಸಮೀಪದ ವಾಣಿವಿಲಾಸಪುರ ಗ್ರಾಮ ದೇವತೆ ಕಣುಮೆಮಾರಮ್ಮದೇವಿ ದರ್ಶನ ಹಾಗೂ ವಾಣಿವಿಲಾಸ ಸಾಗರಕ್ಕೆ  ಆಗಮಿಸಿತ್ತು ಎನ್ನಲಾಗಿದೆ.  ಆದರೆ ಹಿರಿಯೂರಿನಿಂದ ವಾಣಿವಿಲಾಸಪುರ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಬೀರೇನಹಳ್ಳಿ ಬಳಿ ಚಲಿಸುತ್ತಿದ್ದ ಈ ಬಸ್ಸಿನ ಎಂಜಿನ್ ಬಳಿ ಶಾರ್ಟ್ ಸರ್ಕ್ಯೊಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ  ಚಾಲಕ  ಮುಂಜಾಗೃತೆಯಿಂದ ತಕ್ಷಣ  ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ.

ನೋಡು ನೋಡುತ್ತಿದ್ದಂತೆಯೇ ಬಸ್ಸಿಗೆ ಬೆಂಕಿ ಹೊತ್ತಿಕೊಂಡು ಧಗ ಧಗನೆ ಉರಿದು ಸಂಪೂರ್ಣಸುಟ್ಟು ಬಸ್ಮವಾಗಿದೆ ಚಾಲಕನ ಮುಂಜಾಗ್ರತೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ.

Write A Comment