ಕರ್ನಾಟಕ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ, ಮಾ.30ರಿಂದ ಪರೀಕ್ಷೆ ಆರಂಭ

Pinterest LinkedIn Tumblr

sslc-examಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2015-16ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿಯನ್ನು ಶನಿವಾರ ಪ್ರಕಟಿಸಿದ್ದು, ಮಾರ್ಚ್ 30ರಿಂದ ಏಪ್ರಿಲ್ 13ರವರೆಗೆ ಪರೀಕ್ಷೆ ನಡೆಯಲಿವೆ.

ಮಾರ್ಚ್ 30ರಂದು ಪ್ರಥಮ ಭಾಷೆ ಕನ್ನಡ, ಏಪ್ರಿಲ್ 1ರಂದು ವಿಜ್ಞಾನ, ಏಪ್ರಿಲ್ 4 ರಂದು ಗಣಿತ, ಏಪ್ರಿಲ್ 6ರಂದು ದ್ವಿತೀಯ ಭಾಷೆ ಇಂಗ್ಲೀಷ್, ಏಪ್ರಿಲ್ 11ರಂದು ಸಮಾಜ ವಿಜ್ಞಾನ ಹಾಗೂ ಏಪ್ರಿಲ್ 13ರಂದು ತೃತೀಯ ಭಾಷೆ ಹಿಂದಿ ಪರೀಕ್ಷೆ ನಡೆಯಲಿದೆ.

ಎಲ್ಲಾ ಪರೀಕ್ಷೆಗಳು ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿವೆ.

Write A Comment