ಅಂತರಾಷ್ಟ್ರೀಯ

ಸಿಂಗಪೂರ್‌ನಿಂದ ತಮಿಳುನಾಡಿಗೆ 75 ಸಾವಿರ ಡಾಲರ್ ನೆರವು

Pinterest LinkedIn Tumblr

rainಸಿಂಗಪೂರ್, ಡಿ.5- ಭಾರೀ ಮಳೆಯಿಂದ ತತ್ತರಿಸಿರುವ ತಮಿಳುನಾಡು ಜನತೆಯ ರಕ್ಷಣೆಗಾಗಿ, 75 ಸಾವಿರ ಅಮೆರಿಕನ್ ಡಾಲರ್‌ಗಳ ದೇಣಿಗೆ ನೀಡಲಾಗಿದೆ ಎಂದು ಸಿಂಗ್‌ಪೂರ್ ವಿದೇಶಾಂಗ ಖಾತೆ ಸಚಿವ ವಿವಿಯಾನ್ ಬಾಲಕೃಷ್ಣನ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಪತ್ರವನ್ನು ಬರೆದಿರುವ ಬಾಲಕೃಷ್ಣನ್, ತಮಿಳುನಾಡ ಜನತೆಯ ಒಳಿತಿಗಾಗಿ ನಾವು 75 ಸಾವಿರ ಡಾಲರ್‌ಗಳನ್ನು ನೀಡಲಾಗಿದ್ದು, ನಾವು ಸದಾ ನಿಮ್ಮೊಂದಿಗಿದ್ದೇವೆ, ನೀವೇನೂ ಹೆದರುವ ಅಗತ್ಯವಿಲ್ಲ. ನಿಮ್ಮೊಂದಿಗೆ, ನಿಮ್ಮ ಜನತೆಯೊಂದಿಗೆ ನಾವಿದ್ದೇವೆ ಎಂದು ತಿಳಿಸಿದ್ದಾರೆ. ಮಳೆ ಪ್ರವಾಹಕ್ಕೆ ನೂರಾರು ಜನ ಬಲಿಯಾಗಿರುವುದು ನೋವು ತಂದಿದೆ. ಇಡೀ ಸಿಂಗಾಪೂರ್ ಜನ ತಮಿಳುನಾಡಿನ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.

ಅವರ ಕಷ್ಟಕ್ಕೆ ಸಿಂಗಪೂರ್‌ನ ಜನತೆ ಮರುಗಿದ್ದಾರೆ ಎಂದು ಬಾಲಕೃಷ್ಣನ್ ತಿಳಿಸಿದ್ದಾರೆ. ಮಳೆ-ಪ್ರವಾಹ ನಿಂತು ಜನಜೀವನ ಸಹಜ ಸ್ಥಿತಿಗೆ ಬರಲಿ ಎಂದು ನಾವು ಹಾರೈಸುತ್ತೇವೆ ಎಂದು ಅವರು ಹೇಳಿದ್ದಾರೆ.
ಮಳೆ ಮತ್ತು ಪ್ರವಾಹಗಳ ಹಿನ್ನೆಲೆಯಲ್ಲಿ ಸಿಂಗಪೂರ್‌ನ ಚಾಂಗಿ ವಿಮಾನ ನಿಲ್ದಾಣದಿಂದ ಚೆನ್ನೈಗೆ ಬರುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

Write A Comment