ರಾಷ್ಟ್ರೀಯ

ದುಡ್ಡೇ ದೊಡ್ಡಪ್ಪನಲ್ಲ ಅನ್ನ-ನೀರು ಅದರ ಅಪ್ಪ । ಸಾಷ್ಟ್‌ವೇರ್ ಇಂಜಿನಿಯರ್ ಅಳಲು

Pinterest LinkedIn Tumblr

softಚೆನ್ನೈ,ಡಿ.೫-ಪ್ರಕೃತಿ ಮುನಿಸಿಕೊಂಡರೆ ಅದರ ಎದುರಿಗೆ ಮಹಾಲಕ್ಷ್ಮೀ ಕೃಪೆ ಇದ್ದರೂ ಹೊಟ್ಟೆಗೆ ಹಿಟ್ಟಿಲ್ಲದೆ ಪರಿತಪಿಸಬೇಕಾಗುತ್ತದೆ ಎಂಬುದಕ್ಕೆ ಈ ಇಂಜಿನಿಯರ್ ಪ್ರತ್ಯಕ್ಷ ಸಾಕ್ಷಿ.  ಇಲ್ಲಿ ಸತತವಾಗಿ ಸುರಿದ ಕುಂಭದ್ರೋಣ ಮಳೆಯಿಂದ ಅಮೆರಿಕನ್ ಮೂಲದ ಸಾಷ್ಟ್‌ವೇರ್ ಕಂಪನಿ ಇಂಜಿನಿಯರ್‌ರೊಬ್ಬರು ಮನೆಯಿಂದ ಹೊರಗೆ ಬರಲಾಗದೆ ಕಳೆದ ಒಂದು ವಾರದಿಂದ ಬಂಧಿಯಾಗಿದ್ದಾರೆ.  ಸದಾ ಹೋಟೆಲ್‌ನಲ್ಲಿ ಆಹಾರ ಸೇವಿಸುತ್ತಿದ್ದ ಅವರಿಗೆ ಇದೀಗ ಅನ್ನ-ನೀರಿಗಾಗಿ ಪರಿತಪಿಸುವ ಮನಕಲುಕುವ ಪರಿಸ್ಥಿತಿ ಎದುರಾಗಿದೆ.  ಪ್ರಸನ್ನ ವೆಂಕಟರಾಮ್ ಅವರು ವಾರ್ಷಿಕ ೧೮ ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದು, ಮೂರು ಬೆಡ್ ರೂಂನ ಬಂಗ್ಲೆಯ ಮಾಲಿಕರಾಗಿದ್ದು, ಅದರಲ್ಲಿಯೇ ವಾಸಿಸುತ್ತಿದ್ದಾರೆ.

ಒಂದು ಲಕ್ಷ ಮೌಲ್ಯದ ಎರಡು ಕ್ರೆಡಿಟ್ ಕಾರ್ಡ್‌ಗಳನ್ನು ಇವರು ಹೊಂದಿದ್ದಾರೆ.ಅವರ ಬ್ಯಾಂಕ್ ಬ್ಯಾಲೆನ್ಸ್ ಇದೀಗ ೬೫ ಸಾವಿರ ರೂ. ಇದ್ದರೂ  ಹೊರಗೆ ಹೋಗಿ ಹೊಟ್ಟೆಗೆ ಏನೂ ತಿನ್ನಲಾಗುತ್ತಿಲ್ಲ. ಆಪರಿ ಅವರು ವಾಸಿಸುತ್ತಿರುವ ಕಟ್ಟಡದ ತುಂಬಾ ಮಹಾಮಳೆಯ ನೀರು ಆವರಿಸಿಕೊಂಡಿದೆ. ಹಾಗಾಗಿ ಅವರಿಗೆ ಮನೆಯಿಂದ ಹೊರಬರಲಾಗದ ಅಸಹಾಯಕ ಪರಿಸ್ಥಿತಿ.   ಹೌದು…! ಪ್ರತಿಯೊಂದಕ್ಕೂ ದುಡ್ಡೇ ಪರಿಹಾರವಲ್ಲ. ಇದೀಗ ಇಂತಹದೊಂದು ಜ್ಞಾನೋದಯ ಪ್ರಸನ್ನವೆಂಕಟರಾಮ್ ಅವರಿಗೆ ಅನುಭವವಾಗಿದೆ. ಪ್ರವಾಹ ಘಟನೆಯಿಂದ ಅವರು ಪಾಠ ಕಲಿತ್ತಿದ್ದಾರೆ. ಮನುಷ್ಯನಿಗೆ ಬರೀ ದುಡ್ಡಿದ್ದರೆ ಸಾಲದು. ಹೊಟ್ಟೆಗೆ ಅನ್ನ, ಕುಡಿಯಲು ನೀರು ಅತ್ಯಂತ ಮುಖ್ಯವಾದದ್ದು. ಅದಕ್ಕಾಗಿ ಅವರು ಆ ಕಾಣದ ದೇವರಿಗೆ ಪ್ರತಿಕ್ಷಣ ಮೊರೆ ಇಡುತ್ತಾ ಮನೆಯ ಮಾಳಿಗೆ ಮೇಲೆ ನಿಂತು ಆಹಾರಕ್ಕಾಗಿ ಹಪಹಪಿಸುತ್ತಿದ್ದಾರೆ.

ದುಡ್ಡೇ ದೊಡ್ಡಪ್ಪ ಎನ್ನುವವರಿಗೆ ಹೊಟ್ಟೆಗೆ ಬೇಕಾದ ಆಹಾರವೇ ಅದರ ದೊಡ್ಡ ದೊಡ್ಡಪ್ಪ ಎಂಬುದು ಈಗಲಾದರೂ ಮನದಟ್ಟಾದರೆ ಪ್ರಪಂಚ ಸುಂದರಗೊಳ್ಳಬಹುದಲ್ಲವೆ? ಇಂತಹ ಅದೆಷ್ಟು ಮಂದಿ ಇಂದು ಇಲ್ಲಿ ಲಕ್ಷ-ಕೋಟಿ ದುಡ್ಡಿದ್ದರೂ ಒಂದು ಹೊತ್ತಿನ ಊಟಕ್ಕಾಗಿ ಪರಿತಪಿಸುತ್ತಿದ್ದಾರೆ ಎಂಬುದನ್ನು ಊಹಿಸಿಕೊಂಡರೆ ಎಂಥವರ ಮನಸ್ಸು ಕರಗುವುದರಲ್ಲಿ ಸಂಶಯವೇ ಇಲ್ಲ.
( ಆಧಾರ : ವಾಟ್ಸ್ ಆಪ್ )

Write A Comment