ಮುಂಬೈ

ಇಂದ್ರಾಣಿ ಮುಖರ್ಜಿಗೆ ಹಲವರ ಜೊತೆ ಅಫೈರ್ ಇತ್ತು: ವಿವರ ಬಿಚ್ಚಿಟ್ಟ ಮತ್ತೊಬ್ಬ ಬಾಯ್ ಫ್ರೆಂಡ್

Pinterest LinkedIn Tumblr

indrani-mukarji

ಮುಂಬಯಿ: ಶೀನಾ ಬೋರಾ ಕೊಲೆ ಪ್ರಕರಣ ಬೆಳಕಿಗೆ ಬಂದ ನಂತರ ಕೃತ್ಯದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಬಗ್ಗೆ ಪ್ರತಿ ದಿನ ಹತ್ತು ಹಲವು ಹೊಸ ವಿವಾದಗಳು ಬೆಳಕಿಗೆ ಬರುತ್ತಲೇ ಇವೆ.

ಇಂದ್ರಾಣಿ ಮುಖರ್ಜಿ ಗೆ ಹಲವರ ಜೊತೆ ಲವ್ ಅಫೈರ್ ಇತ್ತು ಎಂದು ಆಕೆಯ ಮತ್ತೊಬ್ಬ ಎಕ್ಸ್  ಬಾಯ್ ಫ್ರೆಂಡ್ ಸಿಬಿಐ ಅಧಿಕಾರಿಗಳ ಮುಂದೆ ವಿವರ ಬಿಚ್ಚಿಟ್ಟಿದ್ದಾನೆ.

ಕೊಲ್ಕೋತ್ತಾ ಮೂಲದ ಉದ್ಯಮಿ ಅಭಿಜಿತ್ ಸೇನ್ ಎಂಬಾತ, ಸಿಬಿಐ ಅಧಿಕಾರಿಗಳಿಗೆ ನೀಡಿರುವ ವಿವರದ ಪ್ರಕಾರ ಇಂದ್ರಾಣಿ ತನ್ನ ಮೊದಲ ಪತಿ ಸಂಜೀವ್ ಖನ್ನಾ ಜೊತೆ ವಿವಾಹಕ್ಕೂ ಮುನ್ನ ಹಲವು ಜೊತೆ ಸಂಬಂಧ ಇಟ್ಟು ಕೊಂಡಿದ್ದಳು ಎಂದಿದ್ದಾನೆ.

ಜೊತೆಗೆ ತನಗೂ ಆಕೆಗೂ 1998 ರಿಂದ 99ರವರೆಗೆ ಸುಮಾರು ಒಂದು ವರ್ಷ ಕಾಲ ದೈಹಿಕ ಸಂಪರ್ಕ ಇತ್ತು ಎಂದು ಹೇಳಿದ್ದಾನೆ.

ಇಂದ್ರಾಣಿಗೆ ಬ್ರಿಟನ್  ಮೂಲದ ಪ್ರಮುಖ ಉದ್ಯಮಿಯೊಬ್ಬರ ಪುತ್ರನ ಜೊತೆಗೂ ಸಂಬಂಧ ಇತ್ತು ಎಂದು ಹೇಳಿರುವ ಅಭಿಜಿತ್ ಸೇನ್, ಇಬ್ಬರು ಐಪಿಎಸ್ ಅಧಿಕಾರಿಗಳ ಜೊತೆ ದೈಹಿಕ ಸಂಬಂಧ ಹೊಂದಿದ್ದಳು ಎಂದು ಹೇಳಿದ್ದಾನೆ.

ಇನ್ನೂ ಪೀಟರ್ ಮುಖರ್ಜಿ ಜೊತೆ ವಿವಾಹವಾಗುವ ದಿನ ತನ್ನಿಂದ 4 ಲಕ್ಷ ರೂಪಾಯಿ ಹಣ ಪಡೆದಿದ್ದಳು ಎಂದು ಅಭಿಜಿತ್ ಸೇನ್ ತಿಳಿಸಿದ್ದಾನೆ.

Write A Comment