ಕರ್ನಾಟಕ

ವಿಶ್ವ ವಿಕಲಚೇತನರ ದಿನಾಚರಣೆ’ ಕಾರ್ಯಕ್ರಮ; ಖಾಯಂ ಮಾಡಿ, ಇಲ್ಲವೇ ಸಾಯಲು ಬಿಡಿ: ಸಚಿವರ ಮುಂದೆ ವಿಕಲಚೇತನರ ಅಳಲು

Pinterest LinkedIn Tumblr

Commissioner for The Disabled KS Rajanna, Minister Umashree , Mayor BN Manjunath Reddy seen during the inauguration of the International Day of Persons with Disabilities at Kanteerava Indoor Stadium in Bengaluru on Thursday Dec 03 2015 - KPN ### Celebration of International Day of Persons with Disabilities

ಬೆಂಗಳೂರು, ಡಿ 3: ನಮ್ಮನ್ನು ಸಾಯಲು ಬಿಡಿ ಇಲ್ಲವೇ ನಮ್ಮ ಕೆಲಸವನ್ನು ಖಾಯಂಗೊಳಿಸಿ, ನಮಗೂ ಹೆಂಡತಿ, ಮಕ್ಕಳು-ಸಂಸಾರಗಳಿವೆ, ಸುಮಾರು 10 ವರ್ಷಗಳಿಂದ ಖಾಯಂಗೊಳಿಸುವಂತೆ ಮನವಿಗಳನ್ನು ನೀಡಿದರೂ ಯಾವುದೇ ಸರಕಾರ ಸಹಾಯಕ್ಕೆ ಬಂದಿಲ್ಲ…

ಹೀಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ರಾಜ್ಯದ ಕೆಪಿಟಿಸಿಎಲ್ ಸೇರಿದಂತೆ ವಿವಿಧ ಹೆಸ್ಕಾಂಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ವಿಕಲಚೇತನ ಕಂದಾಯ ಸಹಾಯಕರು…

ಗುರುವಾರ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ‘ವಿಶ್ವ ವಿಕಲಚೇತನರ ದಿನಾಚರಣೆ’ ಕಾರ್ಯಕ್ರಮದಲ್ಲಿ ವಿಕಲಚೇತನರು ಪ್ರತಿಭಟನೆ ನಡೆಸಿದರು.

ರಾಜ್ಯದ ಕೆಪಿಟಿಸಿಎಲ್ ಸೇರಿದಂತೆ ವಿವಿಧ ಹೆಸ್ಕಾಂಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಂದಾಯ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ 600ಕ್ಕೂ ಹೆಚ್ಚು ವಿಕಲಚೇತನ ಉದ್ಯೋಗಿಗಳನ್ನು ಕೂಡಲೇ ಖಾಯಂಗೊಳಿಸಬೇಕು ಈ ವೇಳೆ ಒತ್ತಾಯಿಸಿದರು.
ವಿಕಲಚೇತನ ಉದ್ಯೋಗಿಗಳು ಕಳೆದ 10 ವರ್ಷಗಳಿಂದ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದರೂ ಅವರನ್ನು ಖಾಯಂ ಗೊಳಿಸಿಲ್ಲ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಲ್ಲ, ವೇತನವನ್ನು ಸರಿಯಾಗಿ ನೀಡುತ್ತಿಲ್ಲ ಮತ್ತು ಪಿಎಚ್‌ಡಿ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ದೂರಿದ ಪ್ರತಿಭಟನಾಕಾರರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ವಿಕಲಚೇತನರ ದಿಢೀರ್ ಪ್ರತಿಭಟನೆಯಿಂದ ವೇದಿಕೆಯಲ್ಲಿದ್ದ ಸಚಿವೆ ಉಮಾಶ್ರೀ ಸೇರಿದಂತೆ ಇಲಾಖೆಯ ಅಧಿಕಾರಿಗಳು ಕೆಲಕಾಲ ತಬ್ಬಿಬ್ಬಾದರು. ಈ ವೇಳೆ ಪರಿಸ್ಥಿತಿಯನ್ನು ಶಾಂತಗೊಳಿಸಲು ಮುಂದಾದ ಉಮಾಶ್ರೀ ಕಾರ್ಯಕ್ರಮ ಮುಂದುವರಿಯಲು ಅವಕಾಶ ನೀಡುವಂತೆ ಮನವಿ ಮಾಡಿದರು.
ನಂತರ ಮಾತನಾಡಿದ ಉಮಾಶ್ರೀ, ಕೆಪಿಟಿಸಿಎಲ್ ನೇಮ ಕದ ವೇಳೆ ಇಲಾಖೆಯಲ್ಲಿ ಈಗಾಗಲೇ ಕಾರ್ಯ ನಿರ್ವಹಿಸು ತ್ತಿರುವ ವಿಕಲಚೇತನರನ್ನು ಪರಿಗಣಿಸುವ ಕುರಿತು ಸಚಿವ ಡಿ.ಕೆ.ಶಿವಕುಮಾರ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಅವರೊಂದಿಗೆ ನಾನು ಮತ್ತೊಮ್ಮೆ ಚರ್ಚಿಸಿ ವಿಕಲಚೇತನರನ್ನು ಪರಿಗಣಿಸುವಂತೆ ಮನವಿ ಮಾಡುವುದಾಗಿ ತಿಳಿಸಿದರು.
ಕೆಪಿಟಿಸಿಎಲ್‌ನ ವಿಕಲಚೇತನ ಗುತ್ತಿಗೆ ನೌಕರರ ಪ್ರತಿಭಟನೆಯಿಂದ ನನಗೆ ಯಾವುದೇ ಬೇಸರವಾಗಿಲ್ಲ. ಅವರ ಭಾವನೆಯನ್ನು ಅವರು ಪ್ರತಿಭಟನೆಯ ಮೂಲಕ ವ್ಯಕ್ತಪಡಿಸಿದ್ದಾರೆ. ಇದು ಇನ್ನೊಂದು ಇಲಾಖೆಯೊಂದಿಗೆ ಸೇರಿ ಮಾಡಬೇಕಿರುವ ಕೆಲಸವಾದ್ದರಿಂದ ಸಮಾಧಾನದಿಂದ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಎರಡು ಕೈಗಳಿಲ್ಲದ ಕೆ.ಎಸ್.ವಿಶ್ವಾಸ್ ಹಾಗೂ ಎರಡು ಕಾಲಿಲ್ಲದ ರಶ್ಮಿ ಪ್ರದರ್ಶಿಸಿದ ನೃತ್ಯ ಹಾಗೂ ಕೈ-ಕಾಲು ಎರಡೂ ಇಲ್ಲದ ಮೊಹೀನ್ ಎಂ.ಜುನೇದಿ ಅವರು ಶಾಹಿರಿ ಮೂಲಕ ಪ್ರೇಕ್ಷರನ್ನು ಮೂಕವಿಸ್ಮಿತರನ್ನಾಗಿಸಿದರು. ಈ ವೇಳೆ ಸಚಿವರು ನೃತ್ಯ ಪ್ರದರ್ಶಿಸಿದ ವಿಶ್ವಾಸ್‌ರನ್ನು ತಬ್ಬಿಕೊಂಡು ಅಭಿನಂದಿಸಿದರು.

ಸಮಾರಂಭದಲ್ಲಿ ರಾಜ್ಯ ಅಂಗವಿಕಲರ ಅಧಿನಿಯಮದ ಆಯುಕ್ತ ಕೆ.ಎಸ್.ರಾಜಣ್ಣ, ಮೇಯರ್ ಮಂಜುನಾಥರೆಡ್ಡಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Write A Comment