ಕರ್ನಾಟಕ

ರೋಚಕತೆ ಪಡೆದುಕೊಳ್ಳುತ್ತಿರುವ ಬಿಗ್‍ಬಾಸ್ ಮನೆಗೆ ಬರುತ್ತಿದ್ದಾರೆ ಮತ್ತಿಬ್ಬರು ಸೆಲೆಬ್ರೆಟಿಗಳು ! ಇವರು ಯಾರು ಗೊತ್ತೇ..? ಇಲ್ಲಿದೆ ಓದಿ…

Pinterest LinkedIn Tumblr

big

ಬೆಂಗಳೂರು: ಕನ್ನಡ ಬಿಗ್‍ಬಾಸ್ ಸೀಸನ್ 3 ಕಾರ್ಯಕ್ರಮ ಮತ್ತಷ್ಟು ರೋಚಕತೆ ಪಡೆದುಕೊಳ್ಳಲಿದೆ. ಈ ರಿಯಾಲಿಟಿ ಶೋಗೆ ಮತ್ತಿಬ್ಬರು ಸೆಲೆಬ್ರಿಟಿಗಳು ಎಂಟ್ರಿ ನೀಡುತ್ತಿದ್ದಾರೆ.

ಹೌದು. ಬಿಗ್‍ಬಾಸ್ ರಿಯಾಲಿಟಿ ಶೋಗೆ ಕಿರುತರೆ ನಟಿ ಗೌತಮಿ, ಹಾಸ್ಯ ನಟ ಮಿತ್ರ ಎಂಟ್ರಿ ಕೊಡುತ್ತಿದ್ದಾರೆ. ಈ ಮೂಲಕ ಬಿಗ್‍ಬಾಸ್ ಶೋಗೆ ಮತ್ತಷ್ಟು ಮೆರುಗು ಬರಲಿದೆ. ಗೌತಮಿ, ‘ಚಿ.ಸೌ. ಸಾವಿತ್ರಿ’ ಧಾರವಾಹಿ ಖ್ಯಾತಿಯ ನಟಿ ಹಾಗೂ ಮಿತ್ರ, ರಂಗಭೂಮಿ ಕಲಾವಿದ ಜೊತೆಗೆ ಹಾಸ್ಯ ನಟನಾಗಿದ್ದಾರೆ.

ಇವರಿಬ್ಬರು ವೈಲ್‍ಕಾರ್ಡ್ ಮೂಲಕ ಎಂಟ್ರಿ ಮೂಲಕ ಶೋಗೆ ಬರುತ್ತಿದ್ದು, ಈ ಇಬ್ಬರು ಸಿಕ್ರೇಟ್ ರೂಮ್‍ನಲ್ಲಿ ಪೂಜಾ ಗಾಂಧಿ ಜೊತೆ ಸೇರಲಿದ್ದಾರೆ. ಒಟ್ಟಿನಲ್ಲಿ ಮನೆಯೊಳಗೆ ಕುಳಿತಿರುವ ಸ್ಪರ್ಧಿಗಳು ಇವರನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದು ಸದ್ಯ ಕುತೂಹಲ ಮೂಡಿಸಿದೆ.

Write A Comment