ಕರ್ನಾಟಕ

ದೆಹಲಿಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕುಟುಂಬದ ಐವರು ಸಜೀವ ದಹನ

Pinterest LinkedIn Tumblr

House-fire1

ನವದೆಹಲಿ, ನ.23: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ಐವರು ಸಜೀವವಾಗಿ ಬೆಂದು ಹೋಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಉತ್ತರ ದೆಹಲಿಯ ಬಲ್ಸವಾ ಡೈರಿ ಕಾಲೋನಿಯಲ್ಲಿ ಬೆಳ್ಳಂಬೆಳಗ್ಗೆಯೇ ಮನೆಯೊಂದಕ್ಕೆ ಬೆಂಕಿ ಹೊತ್ತಿಕೊಂಡು ಮನೆಯಲ್ಲಿ ಮಲಗಿದ್ದ ಅಪ್ಪ-ಅಮ್ಮ ಮತ್ತು ಮೂವರು ಮಕ್ಕಳು ಮಲಗಿದಲ್ಲೇ ಸಜೀವವಾಗಿ ಬೆಂದು ಹೋಗಿದ್ದಾರೆ. ಆದರೆ, ಈ ದುರಂತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಷಾರ್ಟ್‌ಶರ್ಕ್ಯುಟ್‌ನಿಂದಾಗಿ ಬೆಂಕಿ ಹೊತ್ತಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಷ್ಟರಲ್ಲಿ ಇಡೀ ಕುಟುಂಬ ಬೆಂದು ಕರಕಲಾಗಿ ಹೋಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Write A Comment