ಅಂತರಾಷ್ಟ್ರೀಯ

ನ್ಯೂ ಓರ್ಲಿಯನ್ಸ್‌ನಲ್ಲಿ ನಗರದ ಕ್ರೀಡಾಂಗಣದಲ್ಲಿ ಗುಂಡಿನ ದಾಳಿ : 16 ಮಂದಿ ಸ್ಥಿತಿ ಚಿಂತಾಜನಕ

Pinterest LinkedIn Tumblr

inci

ನ್ಯೂ ಓರ್ಲಿಯನ್ಸ್ (ಮೆಕ್ಸಿಕೊ), ನ.23: ನ್ಯೂಓರ್ಲಿಯನ್ಸ್ ನಗರದ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ ನಡೆಯುತ್ತಿದ್ದ ಟಿವಿ ಧಾರಾವಾಹಿಯೊಂದರ ಚಿತ್ರೀಕರಣದ ವೇಳೆ ಅಪರಿಚಿತ ದುಷ್ಕರ್ಮಿಗಳು ಯದ್ವಾತದ್ವಾ ಗುಂಡು ಹಾರಿಸಿದ್ದು, 16 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಾಳಿಗೆ ಬಲಿಯಾದವರ ಜೀವದ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಚಿಂತಾಜನಕವಾಗಿರುವ ಗಾಯಾಳುಗಳಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರಿಗೆ ಆಕ್ಸಿಜನ್ (ಆಮ್ಲಜನಕ) ನೀಡಲಾಗುತ್ತಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಗುಂಡಿನ ದಾಳಿ ನಡೆದ ವೇಳೆ ಸುಮಾರು 300ಕ್ಕೂ ಹೆಚ್ಚು ಜನ ಕ್ರೀಡಾಂಗಣದಲ್ಲಿದ್ದರು. ಈ ದಾಳಿಗೆ ಕಾರಣ ತಿಳಿದುಬಂದಿಲ್ಲ. ಆದರೆ, ಒಂದು ಮೂಲದ ಪ್ರಕಾರ ಎರಡು ಗುಂಪುಗಳ ನಡುವೆ ಈ ಶೂಟಿಂಗ್ ನಡೆದಿದೆ. ಈ ಗುಂಪುಗಳಲ್ಲಿದ್ದವರು ಯಾರು ಎಂಬುದು ಗೊತ್ತಾಗಿಲ್ಲ. ಅವರು ಪರಸ್ಪರ ಗುಂಡು ಹಾರಿಸಿಕೊಂಡಿದ್ದೇಕೆ ಎಂಬುದೂ ನಿಗೂಢವಾಗಿಯೇ ಇದೆ ಎಂದು ಎನ್‌ಒಪಿಡಿ ವಕ್ತಾರ ಟೈಲರ್ ಗ್ಯಾಂಬಲ್ ತಿಳಿಸಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Write A Comment