ಕರ್ನಾಟಕ

ಜೈಲಿನಲ್ಲಿರುವ ಹುಚ್ಚ ವೆಂಕಟ್ ವಿರುದ್ಧ ಮತ್ತೊಂದು ದೂರು ದಾಖಲು

Pinterest LinkedIn Tumblr

Huccha-Venkat

ಬೆಂಗಳೂರು: ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರ ಸೇರಿರುವ ಹುಚ್ಚ ವೆಂಕಟ್ ಮೇಲೆ ಈಗ ಮತ್ತೊಂದು ದೂರು ದಾಖಲಾಗಿದೆ.

ಅಂಬೇಡ್ಕರ್ ಮೇಲೆ ಅವಹೇಳನಕಾರಿ ಮಾತನಾಡಿರುವ ಕಾರಣವನ್ನೇ ಮುಂದಿಟ್ಟುಕೊಂಡು ದೂರು ದಾಖಲಾಗಿದ್ದು, ರಾಜ್ಯ ಸಂಘಟನಾ ಸಂಚಾಲಕ ಎಂ.ಆರ್ ವೆಂಕಟೇಶ್ ಕೆ.ಆರ್ ಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಈ ದೂರು ಕೆ.ಆರ್ ಪುರ ಠಾಣೆಯಿಂದ ಜ್ಞಾನಭಾರತಿ ಪೊಲೀಸ್ ಠಾಣೆಗೆ ರವಾನೆಯಾಗಿದೆ.

ಡಾ.ಬಿಆರ್. ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣದಲ್ಲಿ ಹುಚ್ಚ ವೆಂಕಟ್ ರನ್ನು ಡಿ.4 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಂಗಳೂರಿನ 17 ನೇ ಸಿಟಿ ಸಿವಿಲ್ ಕೋರ್ಟ್ ನಿನ್ನೆ ಆದೇಶ ನೀಡಿತ್ತು.

Write A Comment